ನವರಾತ್ರಿ ಸಮಯದಲ್ಲಿ ವೇಷ ಧರಿಸಿ ಧನಸಂಗ್ರಹ ಮಾಡಿದ ಸುಳ್ಯದ ಯುವಕರು
ಕಳೆದ ಮೂವತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಚಾಂದಿನಿಯ ಚಿಕಿತ್ಸೆಗಾಗಿ ಸುಳ್ಯದ ಯುವಕರು ಸೇರಿಕೊಂಡು ನವರಾತ್ರಿ ಸಮಯದಲ್ಲಿ ವಿವಿಧ ವೇಷ ಧರಿಸಿ ಪುತ್ತೂರಿನಿಂದ ಸುಳ್ಯದವರೆಗೆ ರಸ್ತೆ ಬದಿ ಧನಸಂಹ್ರಹ ಮಾಡಿದ ಘಟನೆ ಅ.23ರಂದು ವರದಿಯಾಗಿದೆ.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ವೇಷ ಧರಿಸಿ ಜೀಪಿನಲ್ಲಿ ಹೊರಟ ಯುವಕರ ತಂಡ ಪುತ್ತೂರಿನಿಂದ ಸುಳ್ಯದವರೆಗೆ ರಸ್ತೆಯ ಅಲ್ಲಲ್ಲಿ ಧನಸಂಗ್ರಹ ಮಾಡಿದ್ದಾರೆ.
ಚಾಂದಿನಿಯವರು ವಿಶೇಷ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಯುವಕರಾದ ಸ್ವಸ್ತಿಕ್ ನರಿಯೂರು, ಸ್ವಪ್ನಿಕ್ ನರಿಯೂರು, ನವೀನ್ ಅಡ್ಕಾರು ತುಷಾರ್ ಕಣಜಾಲು ಹಾಗೂ ಪುನೀತ್ ಸಂಕೇಶ ಅವರು ಸೇರಿಕೊಂಡು ಚಂಡ- ಮುಂಡ, ಋಷಿ, ಹಿಡಿಂಬೆ ಹಾಗೂ ಬೇತಾಳ ವೇಷ ಧರಿಸಿ ಧನಸಂಗ್ರಹ ಮಾಡಿದ್ದಾರೆ.