ಅ.28 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ರಹಣ ಪ್ರಯುಕ್ತ ದೇವರ ದರ್ಶನದಲ್ಲಿ ಸಮಯ ಬದಲಾವಣೆ

0

ಅ.28 ರಂದು ಚಂದ್ರಗ್ರಹಣ ಇರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದ ದರ್ಶನ ಮತ್ತು ಸೇವಾ ಸಮಯವನ್ನು ಬದಲಾವಣೆ ಇರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಅಂದು ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30 ಕ್ಕೆ ಮುಕ್ತಾಯವಾಗಲಿದ್ದು
ಸಾಯಂಕಾಲ ಆಶ್ಲೇಷ ಬಲಿ ಸೇವೆ ಇರುವುದಿಲ್ಲ ಹಾಗೂ ದೇವರ ದರ್ಶನ, ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಹಣ ಸ್ಪರ್ಶ: ರಾತ್ರಿ ಗಂಟೆ 1. 04 ಆಗಿದ್ದು, ಗ್ರಹಣ ಮೋಕ್ಷ ಸಮಯ ರಾತ್ರಿ ಗಂಟೆ 2.24 ಆಗಿರುತ್ತದೆ ಎಂದು ತಿಳಿಸಿದ್ದಾರೆ.