ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆಯುಧಪೂಜೆ, ರಂಗಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

0

ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ಮಹಾನವಮಿಯಂದು ಮತ್ತು ವಿಜಯದಶಮಿಯಂದು
ಆಯುಧ ಪೂಜೆ, ರಂಗಪೂಜೆ, ವಿದ್ಯಾರಂಭ (ಅಕ್ಷರಾಭ್ಯಾನ), ತೆನೆಹಬ್ಬ ಮತ್ತು ನವಾನ್ನ ಭೋಜನ ಕಾರ್ಯಕ್ರಮ ಅ.23 ಮತ್ತು ಅ.24ರಂದು
ಜರಗಿತು.ಅ.23ರಂದು ಬೆಳಿಗ್ಗೆ ಆಯುಧ ಪೂಜೆ (ವಾಹನ ಪೂಜೆ) ಅನ್ನಸಂತರ್ಪಣೆ,ಸಂಜೆ ದೀಪಾರಾಧನೆ,ರಾತ್ರಿ ಶ್ರೀದೇವರಿಗೆ ರಂಗಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆಅ. 24ರವಿಜಯದಶಮಿಯಂದು ಆಯುಧಪೂಜೆ (ವಾಹನಪೂಜೆ), ಅಕ್ಷರಾಭ್ಯಾಸ (ವಿದ್ಯಾರಂಭ),
ತನೆಹಬ್ಬ (ತನೆ ಬಿತರಣೆ), ನವಾನ್ನ ಭೋಜನ ನಡೆಯಿತು. ಆಡಳಿತ ಸಮಿತಿಯವರು ಮತ್ತು ಊರವರು ಉಪಸ್ಥಿತರಿದ್ದರು.