
ಅಗ್ನಿಪತ್ ಭಾರತೀಯ ಭೂಸೇನೆಗೆ ಆಯ್ಕೆಯಾದ ಜ್ಞಾನದೀಪ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ಅಭಿಷೇಕ್ ಎಂ. ತಳೂರು ಮೆತ್ತಡ್ಕ ಇವರನ್ನು ಶಾಲಾ ವತಿಯಿಂದ ಅ.25ರಂದು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿನಿಯಾದ ಕುಮಾರಿ ಪೂರ್ವಿ ಅಂಬೆಕಲ್ಲು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಜ್ಞಾನದೀಪ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರಾದ ಎ.ವಿ.ತೀರ್ಥರಾಮ ಇವರು ಭಾರತ ಮಾತೆಗೆ ಪುಷ್ಪಾರ್ಚನೆಗೆಯ್ಯುವುದರ ಮೂಲಕ ಉದ್ಘಾಟಿಸಿದರು. ನಂತರ ಅಗ್ನಿಪತ್ ಗೆ ಆಯ್ಕೆಯಾದ ಅಭಿಷೇಕ್ ಇವರನ್ನು ಶಾಲು ತೊಡಿಸಿ ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯವರಾದ ಶ್ರೀಮತಿ ದಿವ್ಯ ಕುಮಾರಿ. ಕೆ. ಅಭಿಷೇಕ್ ಇವರನ್ನು ಪರಿಚಯಿಸಿದರು. ಬಳಿಕ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಧಾಕೃಷ್ಣ ಶ್ರೀ ಕಟೀಲ್ ಭೂಸೇನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ತದನಂತರ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಗದಾಧರ ಬಾಳುಗೋಡುರವರು ಸೈನಿಕರಾಗಬೇಕಾದರೆ ಇರಬೇಕಾದ ಅರ್ಹತೆಗಳು ಹಾಗೂ ಆಯ್ಕೆಯ ವಿಧಾನಗಳನ್ನು ತಿಳಿಸಿದರು. ಬಳಿಕ ಗೌರವಿಸಲ್ಪಟ್ಟ ಅಭಿಷೇಕ್ ತನ್ನ ನೈಜ ಅನುಭವ ಅನಿಸಿಕೆಗಳನ್ನು ತಿಳಿಸಿದರು. ಶಾಲಾ ಸಹಶಿಕ್ಷಕರಾದ ಪುನೀತ್ ರವಿ.ಎಚ್. ಅನಿಸಿಕೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಇಂದಿರೇಶ್ ಗುಡ್ಡೆ, ಶಾಲಾ ನಿರ್ದೇಶಕರಾದ ಮಹಾವೀರ ಜೈನ್ ಹಾಗೂ ವೇದಿಕೆಯ ಮುಂಭಾಗದಲ್ಲಿ ಪೋಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಸಹ ಶಿಕ್ಷಕಿ ಶ್ರೀಮತಿ ಹೇಮಲತಾ ಸ್ವಾಗತಿಸಿದರೆ, ಸಹ ಶಿಕ್ಷಕಿ ಶ್ರೀಮತಿ ಇಳಾಶ್ರೀ ಧನ್ಯವಾದ ಗೈದರು. ಸಹ ಶಿಕ್ಷಕಿಯವರಾದ ಶ್ರೀಮತಿ ರೇಖಾ ಗುಡ್ಡೆಮನೆ ಹಾಗೂ ಶ್ರೀಮತಿ ಗೌತಮಿ ಇವರು ಕಾರ್ಯಕ್ರಮ ನಿರೂಪಿಸಿದರು.