ಪೆರಾಜೆ ಪ್ರಾ. ಕೃ. ಪ.ಸ. ಸಂಘದ ವತಿಯಿಂದ ಮಾಹಿತಿ ಕಾರ್ಯಾಗಾರ

0

ಪೆರಾಜೆ ಪ್ರಾ. ಕೃ. ಪ.ಸ. ಸಂಘದ ಮತ್ತು ಮಡಿಕೇರಿ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತ ಸದಸ್ಯರಿಗೆ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಗಾರವನ್ನು ಅ.27 ರಂದು ಸಂಘದ ನೂತನ ರೈತ ಸಮುದಾಯ ಭವನದಲ್ಲಿ ನಡೆಯಿತು.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಬಗ್ಗೆ ನೀರಜ, ಸಂಪನ್ಮೂಲ ವ್ಯಕ್ತಿಗಳು, PMFME ಯೋಜನೆ, ಕೃಷಿ ಇಲಾಖೆ ಮಡಿಕೇರಿ ಇವರು ಮಾಹಿತಿ ನೀಡಿದರು. ಆಡು ಮತ್ತು ಹಂದಿ ಸಾಕಾಣಿಕೆ ಬಗ್ಗೆ ವಿಷಯ ತಜ್ಞ ಗೋಣಿಕೊಪ್ಪ ಕೆವಿಕೆಯ ಡಾ. ಸುರೇಶ್ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಬಿ. ವಹಿಸಿದ್ದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಳ್ಳಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಪಿ.ಎಂ., ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರು, ಗ್ರಾಮ ಪಂಚಾಯತ್ ಸದಸ್ಯರುಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ರೈತ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.