ಸ್ನೇಹದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಅ.28 ರಂದು ಜರಗಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಶ್ರೀದೇವಿ ಪಿ ಎಸ್ ಮಾತನಾಡಿ “ವಾಲ್ಮೀಕಿ ಓರ್ವ ಸಂಸ್ಕೃತ ಕವಿ ಹಾಗೂ ಮಹಾನ್ ಋಷಿ. ಪ್ರಚೇತಸ ಮುನಿಯ ಮಗ ಆಗಿರುವ ಕಾರಣ ಪ್ರಾಚೇತಸ ಎಂದು ಕರೆಯಲ್ಪಟ್ಟರು. ನಾರದರ ಉಪದೇಶದಿಂದ ಜ್ಞಾನೋದಯವಾಗಿ ಪರಮಾತ್ಮನ ಧ್ಯಾನ ಮಾಡಿದರು. ಧ್ಯಾನಕ್ಕೆ ಕುಳಿತಲ್ಲಿ ಹುತ್ತ ಬೆಳೆದು ವಾಲ್ಮೀಕಿ ಎಂಬ ಹೆಸರು ಪಡೆದರು. ಮಹಾಕಾವ್ಯ ರಾಮಾಯಣ ರಚಿಸಿದರು.”ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸವಿತಾ ಎಂ ಮಾತನಾಡಿ “ಭಾರತದ ಮಹಾಕಾವ್ಯವೆನಿಸಿರುವ ರಾಮಾಯಣವು ವಾಲ್ಮೀಕಿ ಮಹರ್ಷಿಯವರಿಂದ ರಚಿತವಾಗಿದೆ. ನಾವು ಸಾಧಕರಾಗಬೇಕು. ಅದಕ್ಕೆ ವಾಲ್ಮೀಕಿ ಮಹರ್ಷಿಯವರ ಜೀವನವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಸಾಧನೆಗೆ ಅಡ್ಡಿ ಆತಂಕಗಳು ಬಂದಾಗ ಅದನ್ನು ಎದುರಿಸಿ ಸಾಧಿಸಬೇಕು. ಹಾಗಾಗಿ ವಾಲ್ಮೀಕಿ ಮಹರ್ಷಿ ಮಾದರಿ ಎನಿಸಿಕೊಳ್ಳುತ್ತಾರೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಪ್ರತಿಮಾಕುಮಾರಿ ಕೆ ಎಸ್ ಅವರು ಸ್ವಾಗತಿಸಿದರು. ಶಿಕ್ಷಕಿ ವನಿತಾ ಪಿ ಕೆ ವಂದಿಸಿದರು. ಶಿಕ್ಷಕಿ ಕುl. ಚೈತ್ರಶ್ರೀ ಜಿ ಆರ್ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.