ಪದಗ್ರಹಣ, ಸನ್ಮಾನ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಆದಿ ದ್ರಾವಿಡ ಯುವ ವೇದಿಕೆ ದ.ಕ.ಜಿಲ್ಲೆ ಹಾಗೂ ಆದಿ ದ್ರಾವಿಡ ಯುವ ವೇದಿಕೆ ಸುಳ್ಯ ತಾಲೂಕು ಸಮಿತಿ ಮತ್ತು ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಆದಿ ದ್ರಾವಿಡ ಸಮ್ಮಿಲನ ನ. 5 ರಂದು ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆಯಲಿದೆ ಎಂದು ಆದಿ ದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ ಬಿ.ಕೆ .ಹೇಳಿದರು ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಸಮ್ಮಿಲನ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ, ಸನ್ಮಾನ, ಗೌರವ ಸಮರ್ಪಣೆ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಆದಿದ್ರಾವಿಡ ಸಮಿತಿಯ ಜಿಲ್ಲಾಧ್ಯಕ್ಷರಾದ ರಾಮಚಂದ್ರ ಬಿ.ಕೆ. ವಹಿಸಲಿದ್ದಾರೆ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಕರ್ನಾಟಕ ಆದಿದ್ರಾ ವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಭಾಗ್ ಮಾಡಲಿದ್ದಾರೆ, ಮಂಗಳೂರು ವಿವಿಯ ಕನ್ನಡ ಉಪನ್ಯಾಸಕ ಡಾ.ಯಶು ಕುಮಾರ್ ಮುಖ್ಯ ಭಾಷಣಗಾರರಾಗಿ ಆಗಮಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಕರ್ನಾಟಕ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಅರ್ಬಿಗುಡ್ಡೆ, ಮಾಜಿ ಜಿ.ಪಂ.ಸದಸ್ಯ ಶೇಖರ್ ಕುಕ್ಕೇಡಿ, ಉದ್ಯಮಿ ಆರ್. ಕೆ .ನಾಯರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು .
ಕಾರ್ಯಕ್ರಮದಲ್ಲಿಕಳೆದ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದ್ದು ,ಶಾಸಕಿ ಕು.ಭಾಗೀರಥಿ ಮುರುಳ್ಯರವರಿಗೆ ಸನ್ಮಾನ ಹಾಗೂ ಕೃಷಿ ಕ್ಷೇತ್ರದಲ್ಲಿ ಮೋನಪ್ಪ ರಾಜ ರಾಂಪುರ ,ಗೋಪಾಲ ಮರ್ಕಂಜ,ಲಿಂಗಮ್ಮ ಮರ್ಕಂಜ, ಕಲಾಕ್ಷೇತ್ರದಲ್ಲಿ ಸಂದೀಪ್ ದೇಲಂಪಾಡಿ, ನಿತ್ಯಾನಂದ ಅರಳ ಕೃಷ್ಣಪ್ಪ ಬಂಬಿಲ ಮತ್ತು ವಿನೋದ್ ರಾಜ್ ಕೋಕಿಲ ರವರಿಗೆ ಸನ್ಮಾನ ನಡೆಯಲಿದೆ.ಆದಿ ದ್ರಾವಿಡ ಸಮಾಜದ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಅವರು ಹೇಳಿದರು. ಸಮ್ಮಿಲನದ ಅಂಗವಾಗಿ ನಾಳೆ ಐವನಾಡು ಸರಕಾರಿ ಪ್ರೌಢಶಾಲೆ ವಠಾರದಲ್ಲಿ ಆದಿ ದ್ರಾವಿಡ ಸಮಾಜದ ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟದ ಸ್ಪರ್ಧೆ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜದ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿಳಿಯಾರು, ಉಪಾಧ್ಯಕ್ಷ ಅಶ್ವಿನ್ ಅಜ್ಜಾವರ, ಗೌರವ ಸಲಹೆಗಾರರ ದಾಮೋದರ ಬೇರ್ಯ, ಚಂದ್ರಕಾಂತ್ ಮೂಡಾಯಿತೋಟ, ತಾಲೂಕು ಅಧ್ಯಕ್ಷರಾದ ಮೋನಪ್ಪ ಮಂಡೆಕೋಲು, ಮಹಿಳಾ ಸಮಿತಿ ಅಧ್ಯಕ್ಷ ಸವಿತಾ ನಾವೂರು, ಪ್ರೀತಮ್ ಬಿ.ಸಿ. ರೋಡ್ ಉಪಸ್ಥಿತರಿದ್ದರು