ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

0

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ದಿ|ಮುರಾರಿ ಕಡಪಳ ಮತ್ತು ದಿ| ನವೀನ್ ಸಂಕೇಶ ಸ್ಮರಣಾರ್ಥ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪೈಲಾರು ಪ್ರಿಮೀಯರ್ ಸಂಘಟನಾ ಸಮಿತಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಅ. 28ರಂದು ಚೊಕ್ಕಾಡಿ ಪ್ರೌಡ ಶಾಲೆ, ಕುಕ್ಕುಜಡ್ಕದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಮೀಯರ್ ಲೀಗ್ ಸಂಘಟನಾ ಸಮಿತಿ ವ್ಯವಸ್ಥಾಪಕರಾದಹರ್ಷೀತ್ ಜಿ.ಜೆ ಪೈಲಾರು ವಹಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಮೇಡಿಕಲ್ ಅಫಿಸರ್ ಡಾ. ರಾಮಚಂದ್ರ ಭಟ್ , ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಸಂಚಾಲಕರಾದ ರಾಧಕೃಷ್ಣ ಬೊಳ್ಳೂರು, ಅಮರ ಸಂಘಟನಾ ಸಮಿತಿ ಸುಳ್ಯ ಇದರ ಅಧ್ಯಕ್ಷರಾದ ಪ್ರವೀಣ್ ಕುಲಾಲ್ , ದಿ| ಮುರಾರಿ ಕಡಪಳರವರ ಪತ್ನಿ ವಾರೀಜ ಕಡಪಳ , ದಿ| ನವೀನ್ ಸಂಕೇಶರ ಸಹೋದರಿ ಕವೀತಾ ಸಂಕೇಶ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದರು.

ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಅಮರ ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಹಕರಿಸಿದರು.