ಪ್ರಮೀಳಾ ರಾಜ್ ಅವರ ಎರಡನೇ ಕವನ ಸಂಕಲನ ಕೃತಿ ಬಿಡುಗಡೆ – ಶಿಕ್ಷಕರಿಗೆ ಗೌರವ ಸನ್ಮಾನ

0

ಭಾವಯಾನಿ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಬುದ್ಧ ಕವಿತ್ರಿಯಾಗಿ ರೂಪುಗೊಳ್ಳುತ್ತಿರುವ ಶ್ರೀಮತಿ ಪ್ರಮೀಳಾ ರಾಜ್ ಅವರ ಎರಡನೇ ಕವನ ಸಂಕಲನ ಮೌನ ಜಾತ್ರೆ ಕೃತಿ ಬಿಡುಗಡೆ ಸಮಾರಂಭವು ಅ. 29 ರಂದು ಮಂಗಳೂರಿನ ಪುರ ಭವನದಲ್ಲಿ ನಡೆಯಿತು. ಪಿ .ವಿ ಪ್ರದೀಪ್ ಕುಮಾರ್ ಅವರ ಪ್ರಕಾಶನದ ಅಡಿಯಲ್ಲಿ ಮೂಡಿ ಬಂದ ಈ ಕೃತಿಯನ್ನು, ಅವರ ಪ್ರಾಥಮಿಕ ಶಾಲೆಯ ಗುರುಗಳಾಗಿರುವ ಶ್ರೀಮತಿ ಪ್ರೇಮ ಪ್ರಭಾಕರ್, ಶಿಕ್ಷಕರು ಸರಕಾರಿ ಪ್ರೌಢಶಾಲೆ ವೇಣೂರು ಇವರು ಬಿಡುಗಡೆ ಮಾಡಿದರು.


ನಂತರ ಕೃತಿ ಬಿಡುಗಡೆ ಮಾಡಿದ ಪ್ರೇಮ ಪ್ರಭಾಕರ್ ಹಾಗೂ, ಮಂಗಳೂರಿನ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರಾಗಿರುವ, ಕವಿ ವ ಉಮೇಶ್ ಕಾರಂತ್ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸುಮಾರು 25 ವರ್ಷಗಳ ನಂತರ ಗುರು ವಿದ್ಯಾರ್ಥಿನಿಯರ ಪುನಃರ್ಮಿಲನಕ್ಕೆ ಕಥಾ ಬಿಂದು ಸಾಹಿತ್ಯ ವೇದಿಕೆ ಸಾಕ್ಷಿಯಾಯಿತು.ಮಂಡ್ಯ ಜಿಲ್ಲೆಯ ಕವಯತ್ರಿ ನಾಗಮ್ಮ ಎನ್ ಅವರು ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಮತ್ತು ಉದಾಯೋನ್ಮುಖ ಸಾಹಿತ್ಯ ಪ್ರತಿಭೆ ಉದಯ ಭಾಸ್ಕರ್ ಸುಳ್ಯ ಅವರು ಕೃತಿಗೆ ಬೆನ್ನುಡಿಯನ್ನು ಬರೆದು ಶುಭ ಹಾರೈಸಿದ್ದಾರೆ.ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಕವಿಗಳು, ಲೇಖಕರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.