ಇಂದು ಕೇರಳ ಭಾಗದಲ್ಲಿ ಖಾಸಗಿ ಬಸ್ಸು ಮಾಲಕ ಮತ್ತು ಚಾಲಕರು ವಿವಿಧ ಬೇಡಿಕೆಯನ್ನು ಮುಂದಿಟ್ಟು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆ ಭಾಗದಲ್ಲಿ ಖಾಸಗಿ ಬಸ್ಸುಗಳ ಸಂಚಾರ ವ್ಯತ್ಯಯ ಉಂಟಾಗಿದೆ.
ಇದರಿಂದಾಗಿ ಸುಳ್ಯ ಭಾಗದಲ್ಲಿ ಕೇರಳ ಸರ್ಕಾರಿ ಬಸ್ಸುಗಳು ಕೂಡ ಇಂದು ಸಂಚರಿಸದೆ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂಬ ಸುದ್ದಿ ಹಬ್ಬಿದ್ದು ಈ ರೀತಿಯ ಯಾವುದೇ ತೊಂದರೆಗಳಿಲ್ಲ ಎಂದು ಇಲಾಖೆಯವರು ಸ್ಪಷ್ಟನೆ ನೀಡಿದ್ದಾರೆ.
ಸುಳ್ಯ ಬಸ್ಸು ನಿಲ್ದಾಣದಲ್ಲಿ ಕೇರಳ ಸರ್ಕಾರಿ ಬಸ್ಸುಗಳ ಸಂಚಾರ ಎಂದಿನಂತೆ ಕಂಡುಬರುತ್ತಿದೆ.