ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ

0

ಮಾದಕ ವ್ಯಸನ ಜಾಗೃತಿ ಕುರಿತು ಜನ ಸಂಚಲನ ಅಭಿಯಾನ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕಕ್ಕಾಗಿ ಯುವಜನ ಜಾಗೃತಿ ಎಂಬ ಧ್ಯೇಯವಾಕ್ಯದಲ್ಲಿ ಮಾದಕ ವ್ಯಸನದ ವಿರುದ್ಧ ಜನಸಂಚಲನ ಕಾರ್ಯಕ್ರಮ ನವಂಬರ್ 1ರಂದು ಸುಣ್ಣಮೂಲೆಯಲ್ಲಿ ನಡೆಯಿತು. ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಸಮಿತಿ ಅಧ್ಯಕ್ಷ ಅಬ್ದುಲ್ಲ ಫೈಝಿ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಖತೀಬ್ ಉಸ್ತಾದ್ ಹರ್ಷದ್ ಬಾಖವಿ ದುವಾ ನೆರವೇರಿಸಿದರು. ಯುವ ನ್ಯಾಯವಾದಿ ಅಡ್ವಕೇಟ್ ಫವಾಝ್ ಕನಕಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಭಾಷಣ ಗಾರರಾಗಿ ಆಗಮಿಸಿದ ಅಹ್ಮದ್ ನಈಂ ಫೈಝಿ ಮಾಡನಾಡಿ ಕರ್ನಾಟಕ ರಾಜ್ಯದ ಇತಿಹಾಸ, ಶ್ರೇಷ್ಠತೆಯನ್ನು ವಿವರಿಸುವುದರೊಂದಿಗೆ ಮಾದಕ ವ್ಯಸನದ ಅಪಾಯ ಮತ್ತು ಅದು ಉಂಟುಮಾಡುವ ಆಪತ್ತುಗಳನ್ನು ಸವಿಸ್ತಾರವಾಗಿ ಹೇಳಿದರು.

ಕನಕಮಜಲು ಗ್ರಾ.ಪಂ ಸದಸ್ಯ ಇಬ್ರಾಹಿಂ ಖಾಸಿಂ,ಶ್ರೀ ಆತ್ಮಾರಾಮ ಭಜನಾ ಮಂದಿರ ನಿರ್ದೇಶಕರಾದ ವಿಜಯಕುಮಾರ್ ನರಿಯೂರು, ಎಸ್.ಕೆ.ಜೆ.ಎಂ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ ಮಾತನಾಡಿ ಶುಭಹಾರೈಸಿದರು.

ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ ವ್ಯಸನ ಮುಕ್ತ ರಾಷ್ಟ್ರ ರಕ್ಷಣೆಯ ಪ್ರತಿಜ್ಞೆ ಬೋಧಿಸಿದರು. ಮಾದಕ ವ್ಯಸನದ ದುಷ್ಪರಿಣಾಮಗಳ ಪ್ಲೇ ಕಾರ್ಡ್ ಪ್ರದರ್ಶನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸುಣ್ಣಮೂಲೆ ಜಮಾ ಮಸೀದಿ ಅಧ್ಯಕ್ಷ ಹಸೈನಾರ್ ಕೆ.ಸಿ, ಸುಳ್ಯ ತಾಲೂಕು ಎಸ್.ಎಂ.ಎಫ್ ಅಧ್ಯಕ್ಷ ಹಾಜಿ ಎಸ್.ಎ ಹಮೀದ್, ಜಿಲ್ಲಾ ನಾಯಕರಾದ ಅಕ್ಬರ್ ಕರಾವಳಿ, ಸುಣ್ಣಮೂಲೆ ಶಾಖೆ ಅಧ್ಯಕ್ಷ ಹಕೀಂ ಬಿ.ಕೆ, ಅಬೂಬಕ್ಕರ್ ಪೂಪಿ, ಅಶ್ರಫ್ ರಹ್ಮಾನಿ, ಅಬ್ದುಲ್ಲ ತೋಟುಂಕೆರೆ, ರಂಶಾದ್ ಸುಣ್ಣಮೂಲೆ, ರಫೀಕ್ ಪೆರೋಳಿ, ಜಮಾಲ್ ಯು.ಎ.ಇ, ಸಾದಿಕ್ ಕೆ.ಇ, ಅಲಿ ಹಾಜಿ ಕನಕಮಜಲು, ಮೊಯಿದೀನ್ ಬಿ.ಕೆ ಉಪಸ್ಥಿತರಿದ್ದರು.


ಇಕ್ಬಾಲ್ ಸುಣ್ಣಮೂಲೆ ಸ್ವಾಗತಿಸಿ ವಂದಿಸಿದರು, ಕಲಂದರ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.