ಪ್ರತಿದಿನ ಸಂಜೆ ಸುಳ್ಯದಿಂದ ಕೊಟ್ಟಾಯಂ ಗೆ ಹಾಗೂ ಕೊಟ್ಟಾಯಂ ನಿಂದ ಸುಳ್ಯಕ್ಕೆ
ಲಿಟ್ಲ್ ಪ್ಲವರ್ ಹಾಲಿಡೇಸ್ ಸುಳ್ಯ ಇದರ ವತಿಯಿಂದ ಸುಳ್ಯ ದಿಂದ ಕೊಟ್ಟಾಯಂ ಗೆ ಪ್ರತಿ ದಿನ ಬಸ್ ಸಂಚಾರ ಆರಂಭಗೊಂಡಿದ್ದು
ಅಂಡ್ರೋ ಟ್ರಾವೆಲ್ಸ್ ನ ಬಸ್ ಸುಳ್ಯ ಬಸ್ ನಿಲ್ದಾಣ ಬಳಿಯಿಂದ ಪ್ರತಿ ದಿನ ಸಂಜೆ 6 ಗಂಟೆಗೆ ಹೊರಡಲಿದೆ.
ಇದರ ಚಾಲನೆ ಕಾರ್ಯಕ್ರಮ ಸುಳ್ಯ ಸೈಂಟ್ ಬ್ರಿಜಿಡ್ಸ್ ವಠಾದಲ್ಲಿ ನಡೆಯಿತು.
ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ರೆ.ಪಾ ವಿಕ್ಟರ್ ಡಿಸೋಜ ಆಶಿರ್ವದಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ,ಉದ್ಯಮಿ ಲತೀಫ್ ಹರ್ಲಡ್ಕ, ದೇವ ರಬ್ಬರ್ ನರ್ಸರಿಯ, ಜೋಸ್,ಬೆಸ್ಟೊ ಐಸಾಕ್,ಸೈಂಟ್ ಜೊಸೆಫ್ ವಿದ್ಯಾಸಂಸ್ಥೆ ಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ,ಸೈಂಟ್ ಬ್ರಿಜಿಡ್ಸ್ ಶಾಲೆ ಮುಖ್ಯ ಶಿಕ್ಷಕಿ ಅಂತೊನಿ ಮೇರಿ,ಮಿನಿಮೋಳ್ ನೆಲ್ಸನ್, ನಗರ ಪಂಚಾಯತ್ ಮಾಜಿ ಸದಸ್ಯೆ ಜೂನಿಯಾನ ಕ್ರಾಸ್ತ, ಶ್ರೀಮತಿ ಅಕ್ಷತಾ ಸುದೇಶ್, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಳ್ಯಕ್ಕೆ ಕೊಟ್ಟಾಯಂ ನಿಂದ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಂಡ್ರೋ ಟ್ರಾವೆಲ್ಸ್ ನ ಬಿಜೂ ತೋಮಸ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಅಗಮಿಸಿದ ಸರ್ವರನ್ನೂ ಲಿಟ್ಲ್ ಪ್ಲವರ್ ಗ್ರೂಪ್ಸ್ ನ ನೆಲ್ಸನ್ ಹಾಗೂ ಜೊಮೊನ್ ಲಿಟ್ಲ್ ಪ್ಲವರ್ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ, ಕೊಲ್ಚಾರು,ಬಂದಡ್ಕ ಕೂಲಿಚ್ಚಾಲ್,ರಾಜಪುರಂ,ಕಾಂಞಾಗಾಡ್,ಕಣ್ಣೂರ್,ಕ್ಯಾಲಿಕಟ್,ತ್ರಿಶೂರ್,ಎರ್ನಾಕುಲಂ ಮಾರ್ಗವಾಗಿ ಬೆಳಿಗ್ಗೆ 7 ಗಂಟೆಗೆ ಕೊಟ್ಟಾಯಂ ಗೆ ತಲುಪಲಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಕೊಟ್ಟಾಯಂ ನಿಂದ ಸುಳ್ಯಕ್ಕೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೋಮೊನ್ ತಿಳಿಸಿದ್ದಾರೆ.