ರೋಟರಿ ವಿದ್ಯಾ ಸಂಸ್ಥೆಯಲ್ಲಿ ಕಾರಂತ ನೆನಪು
ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ರೋಟರಿ ಪ್ರೌಢ ಶಾಲೆ ಮಿತ್ತಡ್ಕ, ರೋಟರಿ ಕ್ಲಬ್ ಸುಳ್ಯ ಇದರ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ ಶಿವರಾಮ ಕಾರಂತರ ನೆನಪು ಕಾರ್ಯಕ್ರಮ ನ. 03 ರಂದು ರೋಟರಿ ಶಾಲೆ ಮಿತ್ತಡ್ಕದಲ್ಲಿ ನಡೆಯಿತು.
ಕಸಾಪ ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಉದ್ಘಾಟಿಸಿದರು.
ಸಾಹಿತಿ ಹಾಗೂ ಜನಪದ ಸಂಶೋಧಕ ಡಾ. ಪೂವಪ್ಪ ಕಣಿಯೂರು ಕಾರಂತರ ಕುರಿತು ಮಾತನಾಡಿದರು. ರೋಟರಿ ವಿದ್ಯಾ ಸಂಸ್ಥೆಯ ಸಂಚಾಲಕ ಗಿರಿಜಾ ಶಂಕರ ತುದಿಯಡ್ಕ ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ, ಕಸಾಪ ಕೋಶಾಧಿಕಾರಿ ದಯಾನಂದ ಅಳ್ವ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ವೇದಿಕೆಯಲ್ಲಿದ್ದರು.
ವಿದ್ಯಾ ಸಂಸ್ಥೆಯ ವಿದ್ಯಾರ್ಥಿಳಿಂದ ಗೀತಾ ಗಾಯನ – ವಾಚನ ನಡೆಯಿತು.
ಕಾರ್ಯಕ್ರಮ ನಿರ್ದೇಶಕ ಯೋಗೀಶ್ ಹೊಸೊಳಿಕೆ ಸ್ವಾಗತಿಸಿ, ದೇವಪ್ಪ ಹೈದಗೂರು ವಂದಿಸಿದರು. ಶಿಕ್ಷಕಿ ರಮ್ಯಾ ಅಡ್ಕರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಂಸ್ಥೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.