ಕಾರವಾರ ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಯೋಜನಾ ನಿರ್ದೇಶಕ ಬಿ.ಕೆ.ಚೆನ್ನಕೇಶವರವರು ಸೇವಾ ನಿವೃತ್ತಿ – ಸನ್ಮಾನ, ಬೀಳ್ಕೊಡುಗೆ

0

ಕಾರವಾರದ ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾದ ಯೋಜನಾ ನಿರ್ದೇಶಕರಾದ ಬಿ.ಕೆ.ಚೆನ್ನಕೇಶವರವರು ಅ.31 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವು ಕೈಗಾದಲ್ಲಿ ನಡೆಯಿತು.
ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರನ್ನು ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸ್ಥಳ ನಿರ್ದೇಶಕರಾದ ಕೆ.ಜಿ.ಎಸ್ 1-6 ನ ಪ್ರಮೋದ್ ರಾಯಚೂರು, ಕೇಂದ್ರ ನಿರ್ದೇಶಕರಾದ ಕೆ.ಜಿ.ಎಸ್.1-2 ನ ವೈ.ಬಿ.ಭಟ್ , ಕೇಂದ್ರ ನಿರ್ದೇಶಕರಾದ ಕೆ.ಜಿ.ಎಸ್.ನ 3-4 ನ ವಿನೋದ್ ಕುಮಾರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಚೆನ್ನಕೇಶವರವರ
ಪತ್ನಿ ಶ್ರೀಮತಿ ಕವಿತಾ ಚೆನ್ನಕೇಶವ ಮಗಳು ಶ್ರೀಮತಿ ಡಾl ಶಿಭಾನಿ ಮತ್ತು ಅಳಿಯ ಡಾl ಭರತೇಶ್ , ಮಗ ಹರ್ಷಿಲ್ ಉಪಸ್ಥಿತರಿದ್ದರು
ಉಪಸ್ಥಿತರಿದ್ದರು.