ಸುಳ್ಯ ಅನ್ಸಾರಿಯಾದಲ್ಲಿ ಆರ್ಟ್ಸ್ ಅಲೈವ್ ಹಾಗೂರಾಜ್ಯ ಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ : ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ

0

ಸುಳ್ಯದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನಲ್ಲಿ ನವೆಂಬರ್ 3, 4 ಮತ್ತು 5 ರಂದು ಆರ್ಟ್ಸ್ ಅಲೈವ್ ಅನ್ಸಾರಿಯಾ ಕ್ಯಾಂಪಸ್ ಫೆಸ್ಟ್ ಕಾರ್ಯಕ್ರಮ ಮತ್ತು ರಾಜ್ಯಮಟ್ಟದ ಮುಹ್ಯದ್ದೀನ್ ಮಾಲಾ ಅಲಾಪನೆ ಕಾರ್ಯಕ್ರಮಕ್ಕೆ ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.

ನ.3 ರಂದು ಶುಕ್ರವಾರ ಅಸರ್ ನಮಝ್ ಬಳಿಕ ಅನ್ಸಾರಿಯ ಅಧ್ಯಕ್ಷರಾದ ಹಾಜಿ ಅಬ್ದುಲ್‌ ಮಜೀದ್ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯ‌ಮಟ್ಟದ ಮುಹ್ಯುದ್ದೀನ್ ಮಾಲಾ ಅಲಾಪನೆ ಕಾರ್ಯಕ್ರಮ ಉದ್ಘಾಟನೆ ಅಬ್ದುಲ್‌ ರಶೀದ್ ಝೈನಿ ನೆರವೇರಿಸಿದರು.

ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ನೀಡಿದರು.
ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ಅನ್ಸಾರಿಯ ಲೋಗೊ ಅನಾವರಣಗೊಳಿಸಿದರು.
ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್ ಅನ್ಸಾರಿಯ ಕ್ಯಾಲೆಂಡರ್ ಬಿಡುಗಡೆ ಗೊಳಿಸಿದರು.
ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ,ಅನ್ಸಾರಿಯ ಜಿಸಿಸಿ ಕೋಶಾಧಿಕಾರಿ ಹಾಜಿ ಹಮೀದ್ ಎಸ್ ಎಂ, ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ,ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ
ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಉಪಾಧ್ಯಕ್ಷರಾದ ಅಬ್ದುಲ್‌ ಖಾದರ್ ಪಟೇಲ್, ಅಬೂಭಕ್ಕರ್ ಎಸ್ ಪಿ, ನಿರ್ದೇಶಕ ಕೆ.ಬಿ.ಇಬ್ರಾಹಿಂ,ಶಾಫಿ ಕುತ್ತಮೊಟ್ಟೆ, ಉಮ್ಮರ್ ಕೊಲ್ಚಾರ್, ಮ್ಯಾನೇಜರ್ ಮಹಮ್ಮದ್ ಉವೈಸ್ ಇದ್ದರು.