ಹಬ್ಬದ ಸಂಭ್ರಮಕ್ಕೆ ಭರಪೂರ ಉಡುಗೊರೆ – ಇಂಡಿಯಾ ಜ್ಯುವೆಲ್ಲರಿ ಶಾಪಿಂಗ್ ಫೆಸ್ಟಿವಲ್ ನಲ್ಲಿ ಚಿನ್ನ ಗೆಲ್ಲುವ ಅವಕಾಶ
ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ದೀಪಾವಳಿ ಫೆಸ್ಟಿವಲ್ ಸೇಲ್ ಗೆ ನ.೪ರಂದು ಬೆಳಿಯೂರು ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಇಂದಿರಾ ಭಂಡಾರಿ ಕೆ.ಎಂ.ರವರು ಚಾಲನೆ ನೀಡಿದರು.
ಮಾಡೆಲ್ & ಯೂಟೂಬರ್ ಆಗಿರುವ ಪ್ರತೀಕ್ಷಾ, ಮಾಡೆಲ್ & ಡಿಸೈನರ್ ಶರಿಯಾ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ರೈ, ಗ್ರಾಹಕರಾದ ಶರತ್ ಮತ್ತು ಶಿಶಿರರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕರಾದ ರತೀಶ್ ಸಿ.ಪಿ. ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಲೆನೀಶ್ ಪಿ. ವಂದಿಸಿದರು. ಸಿಬ್ಬಂದಿ ಶೃಜನ್ಯ ಡಿ. ಕಾರ್ಯಕ್ರಮ ನಿರೂಪಿಸಿದರು.
ದೀಪಾವಳಿ ಕೊಡುಗೆಗಳು:
ಪ್ರತಿಯೊಂದು ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ತನ್ನ ಗ್ರಾಹಕರೊಂದಿಗೆ ಆಚರಿಸಿಕೊಂಡು ಬರುತ್ತಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯು ಬೆಳಕಿನ ಹಬ್ಬ ದೀಪಾವಳಿಯನ್ನು ಮತ್ತಷ್ಟು ವೈಶಿಷ್ಟ್ಯ ಪೂರ್ಣವಾಗಿಸಲು ಮುಂದಾಗಿದೆ. ಯಾವುದೇ ಚಿನ್ನದ ಆಭರಣವನ್ನು ಕೊಳ್ಳುವಾಗ ಬೆಳ್ಳಿ ನಾಣ್ಯ ಉಚಿತವಾಗಿ ಲಭಿಸಲಿದೆ. ಅದೇ ರೀತಿ ವಜ್ರದ ಪೆಂಡೆಂಟ್, ವಜ್ರದ ನೆಕ್ಲೆಸ್ ಸಹಿತ ವಜ್ರಾಭರಣ ಖರೀದಿ ವೇಳೆ ಚಿನ್ನದ ನಾಣ್ಯ ಉಚಿತವಾಗಿ ಲಭಿಸಲಿದೆ. ಉಳಿದಂತೆ ವಜ್ರಗಳ ಮೇಲೆ ೨೦% ರೀಯಾಯಿತಿ. ಪ್ಲಾಟಿನಂ ಆಭರಣಗಳಿಗೆ ೭% ರಿಯಾಯಿತಿ ದೊರೆಯಲಿದೆ. ತಮ್ಮ ಹಳೆಯ ಆಭರಣಗಳನ್ನು ಹೊಸ HUID ಆಭರಣಗಳಿಗೆ ಎಕ್ಸ್ ಚೇಂಜ್ ಮಾಡುವ ವೇಳೆ ೧೦೦% ಅಂದಿನ ಚಿನ್ನದ ದರ ಲಭಿಸಲಿದೆ.
ಇಂಡಿಯಾ ಜ್ವುವೆಲ್ಲರಿ ಶಾಪಿಂಗ್ ಫೆಸ್ಟಿವಲ್ ೨೦೨೩:
ಸಂಸ್ಥೆಯು ಈ ಭಾರಿಯ ಬೆಳಕಿನ ಹಬ್ಬ ದೀಪಾವಳಿಗೆ ಚಿನ್ನದ ಮೆರಗು ನೀಡಲು ಮುಂದಾಗಿದ್ದು, ಗ್ರಾಹಕರಿಗೆ
ವಿಶ್ವದ ಅತೀದೊಡ್ಡ ಆಭರಣ ಉತ್ಸವಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಜೋಸ್ ಆಲುಕ್ಕಾಸ್ ಕಲ್ಪಿಸಿದೆ. ಪ್ರತೀ ೨೫೦೦೦ ರೂಪಾಯಿ ಮೌಲ್ಯದ ಚಿನ್ನದ ಆಭರಣ ಖರೀದಿ ವೇಳೆ ಇಂಡಿಯಾ ಜ್ವುವೆಲ್ಲರಿ ಶಾಪಿಂಗ್ ಫೆಸ್ಟಿಲ್ ನ ಕೂಪನ್ ಲಭಿಸಲಿದೆ. ಅದರ ಮೂಲಕ ಮೆಗಾ ಬಹುಮಾನವಾಗಿ ಒಂದು ಕೆ.ಜಿ. ಚಿನ್ನ ಗೆಲ್ಲುವ ಅವಕಾಶವಿದೆ. ಇಷ್ಟು ಮಾತ್ರವಲ್ಲದೆ ಐವರು ವಿಜೇತರಿಗೆ ತಲಾ ಹತ್ತು ಲಕ್ಷರೂಪಾಯಿ ಬೆಲೆಬಾಳುವ ಚಿನ್ನಾಭರಣ, ಐವರು ವಿಜೇತರಿಗೆ ತಲಾ ಹತ್ತು ಲಕ್ಷರೂಪಾಯಿ ಮೌಲ್ಯದ ಟೆಂಪಲ್ ಜ್ವುವೆಲ್ಲರಿ, ಹತ್ತು ಮಂದಿಗೆ ತಲಾ ಐದುಲಕ್ಷ ರೂಪಾಯಿ ಮೌಲ್ಯದ ಡೈಂಮಡ್ ಕಿವಿಯೋಲೆಗಳು, ಹತ್ತು ಮಂದಿಗೆ ತಲಾ ಎರಡೂವರೆ ಲಕ್ಷರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನೂರು ಮಂದಿಗೆ ಡೈಮಂಡ್ ಹೊಂದಿರುವ ಗೋಲ್ಡ್ ಕಾಯಿನ್ ಲಭಿಸಲಿದೆ. ಪ್ರತೀ ೫೦೦೦ ಕೂಪನ್ ಗಳು ಗ್ರಾಹಕರ ಕೈಸೇರಿದ ಕೂಡಲೇ ಡ್ರಾ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಜೋಸ್ ಆಲುಕ್ಕಾಸ್ ಸಂಸ್ಥೆಯ ದೂರವಾಣಿ ಸಂಖ್ಯೆ 08251- 298526 ಯನ್ನು ಸಂಪರ್ಕಿಸಬಹುದಾಗಿದೆ.
ಚಿನ್ನದ ಆಭರಣವನ್ನು ಖರೀದಿಗೆ ಬೆಳ್ಳಿ ನಾಣ್ಯ ಉಚಿತವಾಗಿ
ವಜ್ರಾಭರಣ ಖರೀದಿ ವೇಳೆ ಚಿನ್ನದ ನಾಣ್ಯ ಉಚಿತ
ಉಳಿದಂತೆ ವಜ್ರಗಳ ಮೇಲೆ ೨೦% ರೀಯಾಯಿತಿ
ಪ್ಲಾಟಿನಂ ಆಭರಣಗಳಿಗೆ ೭% ರಿಯಾಯಿತಿ
ಹಳೆಯ ಆಭರಣಗಳನ್ನು ಹೊಸ HUID ಆಭರಣಗಳಿಗೆ ಎಕ್ಸ್ ಚೇಂಜ್