ಬೀದಿಗುಡ್ಡೆ: ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ನಿಂದ ಸಮವಸ್ತ್ರ ಬಿಡುಗಡೆ

0

ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ನ ಆಟಗಾರರಿಗೆ ದಾನಿಗಳಿಂದ ಕೊಡುಗೆಯಾಗಿ ಬಂದ ಹೊಸ ಸಮವಸ್ತ್ರವನ್ನು ಶ್ರೀ ನ. 4ರಂದು ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಂಸ್ಥೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮವಸ್ತ್ರದ ದಾನಿಗಳಾಗಿ ಮೋಹನ ಅಂಜೇರಿ, ನಡುಗಲ್ಲು, ದೇವಿಪ್ರಸಾದ್ ರೈ ಗೆಜ್ಜೆ, ರವಿ ಕೊಠಾರಿ, ಸುಮಂತ್ ದೊಡ್ಡಮನೆ, ರಾಕೇಶ್ ಎಣ್ಣೆಮಜಲು, ಬಾಲಕೃಷ್ಣ ಕೊಠಾರಿ ಸಹಕರಿಸಿದರು.