ಅಡ್ಕದಲ್ಲಿ ನವೆಂಬರ್ 19 ರಂದು ನಡೆಯಲಿರುವಝೈನಿಯಾ ಮಹಿಳಾ ಕಾಲಾ ಸಾಹಿತ್ಯ ಹಬ್ಬದ ಲೋಗೋ ಬಿಡುಗಡೆ

0

ನವೆಂಬರ್ 07 ರಂದು ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ಅಧೀನದಲ್ಲಿ ಕಾರ್ಯಾಚರಿಸುವ ಝೈನ್ ಎಕ್ಸೆಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಮಹಿಳಾ ಶರಿಅತ್ ಕಾಲೇಜ್ ಇದರ ವಿಧ್ಯಾರ್ಥಿನಿಯರ ಝೈನಿಯಾ ಶೀ ಪೆಸ್ಟ್ ಕಾರ್ಯಕ್ರಮದ ಲೋಗೋ ಬಿಡುಗಡೆ ಕಾರ್ಯಕ್ರಮ ರಿಪಾಇಯ್ಯ ಮಸ್ಜಿದ್ ಮರ್ಹೂಂ ಹಾಜಿ ಎಂ ಎ ಅಬ್ದುಲ್ಲಾ ಉಸ್ತಾದ್ ಮಂಡೆಕೋಲು ನಗರದಲ್ಲಿ ಝೈನಿಯಾ ಚಯರ್ಮೇನ್ ಅನ್ವರ್ ಅಲಿ ದಾರಿಮಿ ಉಸ್ತಾದ್ ದಫ್ ಉಸ್ತಾದ್ ಎಂ ಎ ಮಹಮ್ಮದ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ರೇಂಜ್ ಜಮ್ಯಹತುಲ್ ಮುಹಲ್ಲಿಂ ಕೋಶಾಧಿಕಾರಿ ಹಸೈನಾರ್ ದರ್ಮತಣ್ಣಿ, ಬದ್ರಿಯಾ ಜುಮಾಅತ್ ಇರುವಂಬಳ್ಳ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ತುಪ್ಪಕಲ್ಲು, ಜಿ ಎಸ್ ಮಹಮ್ಮದ್ ಮದನಿ ಉಸ್ತಾದ್, ಎಸ್ ಕೆ ಎಸ್‌ ಎಸ್ ಎಫ್ ಅಧ್ಯಕ್ಷರಾದ ಸಿದ್ದೀಕ್ ಅಡ್ಕ, ಪ್ರದಾನ ಕಾರ್ಯದರ್ಶಿ ಸಿದ್ದೀಕ್ ಬೊವೀಕ್ಕಾನ, ಝೈನಿಯಾ ಸಂಘಟನಾಧ್ಯಕ್ಷರಾದ ಹಾರಿಸ್ ಕಲ್ತಡ್ಕ, ಝೈನಿಯಾ ಉಪಾಧ್ಯಕ್ಷರಾದ ಸಲೀಂ ಎಂ ಎ , ಟ್ರೆಂಡ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೆ ಎಂ, ಝೈನಿಯಾ ಕೋಶಾಧಿಕಾರಿ ಮಹಮ್ಮದ್ ಕೆ ಎ , ಸನಾಝ್ ಕಲ್ತಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಝೈನಿಯಾ ಪ್ರಾಂಶುಪಾಲರಾದ ಉಸ್ತಾದ್ ಅಬ್ದುಲ್ಲಾ ನಿಝಾಮಿ ಅಧ್ಯಕ್ಷತೆ ವಹಿಸಿ ಸಂಚಾಲಕರಾದ ಮುಹಿಯ್ಯದ್ದೀನ್ ಅನ್ಸಾರಿ ಸ್ವಾಗತಿಸಿ , ಅಧ್ಯಾಪಕರಾದ ಅಬ್ಬಾಸ್ ಅನ್ಸಾರಿ ನಿರೂಪಿಸಿದರು.