ಅರಂತೋಡು: ಜಿಮ್ ಕೇಂದ್ರಕ್ಕೆ ಮಾಜಿ ಸಚಿವ ಕೋಟ ಚಾಲನೆ

0


ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಸಿದ್ಧವಾದ
ಅರಂತೋಡು ಗ್ರಾಮ ಪಂಚಾಯತಿಯ ಜಿಮ್ ಕೇಂದ್ರವನ್ನು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ನ.7ರಂದು ಉದ್ಘಾಟಿಸಿ, ಶುಭಹಾರೈಸಿದರು‌.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನ್ನೂರು, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಗ್ರಾ.ಪಂ. ಸದಸ್ಯರುಗಳು, ಬಿಜೆಪಿ ನಾಯಕರಾದ ಎಸ್. ಎನ್. ಮನ್ಮಥ, ಸುಬೋಧ್ ಶೆಟ್ಟಿ ಮೇನಾಲ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಉಪಾಧ್ಯಕ್ಷ ದಯಾನಂದ ಕುರುಂಜಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಸೇರಿದಂತೆ ಅರಂತೋಡು ಸಹಕಾರಿ ಸಂಘದ ನಿರ್ದೇಶಕರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.