ಕಲ್ಚರ್ಪೆಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ , ಪರಿಶೀಲನೆ

0

ಮಾಜಿ ಸಚಿವರ ಎದುರಲ್ಲೇ ನ.ಪಂ ಸದಸ್ಯ ಹಾಗೂ ಸ್ಥಳೀಯ ನಿವಾಸಿ ನಡುವೆ ವಾಕ್ ಸಮರ

ಇಂದು ಸುಳ್ಯ ನಗರಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಲ್ಚರ್ಪೆಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಇಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಿಧಾನಪರಿಷತ್ ಸದಸ್ಯರ ಜೊತೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು ಭಾಗಿರಥಿ ಮುರುಳ್ಯ,ನಗರ ಪಂಚಾಯತ್ ಸದಸ್ಯರುಗಳು,ಮತ್ತು ಬಿಜೆಪಿ ಪಕ್ಷದ ಇತರ ಮುಖಂಡರುಗಳು ಉಪಸ್ಥಿತರಿದ್ದರು.

ಕಸ ವಿಲೇವಾರಿ ಘಟಕದಲ್ಲಿ ಅಳವಿಡಿಸಲಾಗಿರುವ ಬರ್ನಿಂಗ್ ಮಷೀನ್ ಬಳಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕರು ಹಾಗೂ ನಗರ ಪಂಚಾಯತಿ ಸದಸ್ಯರುಗಳಿದ್ದು ಇಲ್ಲಿಯ ಕಾರ್ಯವೈಖರಿಯ ಬಗ್ಗೆ ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ಮಾಹಿತಿ ನೀಡುತ್ತಿದ್ದರು.


ಈ ಸಂದರ್ಭದಲ್ಲಿ ಇಲ್ಲಿಗೆ ಬಂದ ಸ್ಥಳೀಯ ನಿವಾಸಿ ಹಾಗೂ ಈ ಪರಿಸರದ ಹೋರಾಟ ಸಮಿತಿಯ ಮುಖ್ಯಸ್ಥ ಅಶೋಕ್ ಪೀಚೆ ಶ್ರೀನಿವಾಸ್ ಪೂಜಾರಿಯೊಂದಿಗೆ ಇಲ್ಲಿ ಯಾವುದೇ ವ್ಯವಸ್ಥೆಗಳು ಸರಿ ಇಲ್ಲ. ಸದಾ ಒಂದಲ್ಲ ಒಂದು ಸಮಸ್ಯೆಗಳು ಮಾತ್ರ ಇಲ್ಲಿ ನಡೆಯುತ್ತದೆ ವಿನಹ ಇವರು ತಮಗೆ ವಿವರಿಸುವ ರೀತಿಯಲ್ಲಿ ಯಾವುದೇ ಕಾರ್ಯಚಟಿಯವಟಿಕೆಗಳು ನಡೆಯುವುದಿಲ್ಲ ಎಂದು ಹೇಳಿದರು.

ಈ ವೇಳೆ ವಿನಯ್ ಕುಮಾರ್ ಕಂದಡ್ಕರವರು ಅವರಿಗೆ ಉತ್ತರ ನೀಡಿ ನೀವು ಕೇವಲ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೀರಿ ಇಲ್ಲಿ ಆಗಿರುವ ಅಭಿವೃದ್ಧಿಯ ಕುರಿತು ಮಾತನಾಡುತ್ತಿಲ್ಲ ಎಂದು ಹೇಳಿದರು ಎನ್ನಲಾಗಿದ್ದು ಅಲ್ಲದೆ ನೀವು ಪತ್ರಿಕಾಗೋಷ್ಠಿಯನ್ನು ಕರೆದು ನಗರ ಪಂಚಾಯತಿಯನ್ನು ಮಾತ್ರ ದೂರುತ್ತಿರುತ್ತೀರಿ ಎಂದು ಹೇಳಿದರು.

ಈ ವೇಳೆ ಅಶೋಕ್ ಅವರು ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನೀವು ಮಾಡಿಲ್ಲ.ಕೇವಲ ದೊಡ್ಡ ದೊಡ್ಡ ಜನಪ್ರತಿನಿಧಿಗಳು ಶಾಸಕರು ಸಚಿವರು ಬರುವ ಸಂದರ್ಭದಲ್ಲಿ ಅಂದು ಮಾತ್ರ ಇಲ್ಲಿ ಸ್ವಚ್ಛತೆಯನ್ನು ಮಾಡುತ್ತೀರಿ. ಮತ್ತೆ ಅವರು ತೆರಳಿದ ಬಳಿಕ ಎಂದಿನಂತೆ ಕಸದ ರಾಶಿಗಳು ರಸ್ತೆಯಲ್ಲಿ ಮತ್ತಿತರ ಜಾಗದಲ್ಲಿ ನಾಯಿಗಳು ಇತರ ಪ್ರಾಣಿಗಳು ತಂದು ಹಾಕುತ್ತಿರುತ್ತವೆ. ಪರಿಸರ ಕಸದ ರಾಶಿಯಿಂದ ಗಬ್ಬುನಾರುತಿರುತ್ತವೆ.
ಅಲ್ಲದೆ ವಿಧಾನ ಪರಿಷತ್ ಸದಸ್ಯರಂತಹ ಮುಖಂಡರು ಇಲ್ಲಿಗೆ ಬಂದಾಗ ಸ್ಥಳೀಯರ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳುವುದು ನಮ್ಮ ಕರ್ತವ್ಯ. ಅದನ್ನು ನಾನು ಅವರಲ್ಲಿ ಹೇಳುತ್ತಿದ್ದೇನೆ ಎಂದು ಹೇಳಿದಾಗ ವಿನಯಕುಮಾರ್ ಕಂದಡ್ಕ ಮತ್ತು ಅಶೋಕ್ ರವರ ನಡುವೆ ಮಾತಿನ ಚಕಾಮುಕಿ ನಡೆಯಿತು ಎನ್ನಲಾಗಿದೆ. ಹಾಗೂ ಕೋಟ ಶ್ರೀನಿವಾಸ್ ಪೂಜಾರಿಯವರ ಬಳಿ ಅಶೋಕ್ ಪೀಚೆ ಮಾತನಾಡಿ ಕಸಕ್ಕೆ ಸಂಬಂಧಿಸಿದಂತೆ ಇಲ್ಲಿ ಕಾರ್ಯಚರಿಸುತ್ತಿರುವ ಯಂತ್ರ ಯಾವುದೇ ಪ್ರಯೋಜನವನ್ನು ಕೊಡುತ್ತಿಲ್ಲ.ಇಲ್ಲಿಗೆ ಇದಕ್ಕಿಂತ ದೊಡ್ಡ ಯಂತ್ರವನ್ನು ತಂದು ಕೆಲಸ ಕಾರ್ಯಗಳು ಮಾಡಿದರೆ ಮಾತ್ರ ಇಲ್ಲಿಯ ಸಮಸ್ಯೆಗಳು ಪರಿಹಾರ ಆಗಬಹುದೇ ವಿನಹ ಅಲ್ಲದೆ ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು ಎನ್ನಲಾಗಿದೆ.
ಬಳಿಕ ಅಲ್ಲಿಂದ ವಿಧಾನಪರಿಷತ್ ಸದಸ್ಯರು, ಶಾಸಕರು,ನಗರ ಪಂಚಾಯತ್ ಸದಸ್ಯಗಳ ಜೊತೆ ಸೇರಿ ಸ್ಥಳೀಯ ಪರಿಸರದ ವೀಕ್ಷಣೆಗೆ ತೆರಳಿದರು ಎನ್ನಲಾಗಿದೆ.

ಈ ಕುರಿತು ಸುದ್ದಿಯೊಂದಿಗೆ ಮಾತನಾಡಿರುವ ಅಶೋಕ್ ಪೀಚೆ ನಾವು ಇಂತಹ ಮುಖಂಡರುಗಳು ಬಂದಾಗ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕರ್ತವ್ಯ. ಏಕೆಂದರೆ ಇದು ಕೇವಲ ನನಗೆ ಮಾತ್ರ ಇರುವುದಲ್ಲ ನಮ್ಮ ಇಡೀ ಊರಿನ ಜನರಿಗೆ ಮತ್ತು ಪರಿಸರದ ನಿವಾಸಿಗಳಿಗೆ ಬೇಕಾಗಿ ಮಾತನಾಡಬೇಕಾಗುತ್ತದೆ. ಕಸದ ಬರ್ನಿಂಗ್ ಮಷೀನ್ ನಿಂದ ಹೊರ ಬರುತ್ತಿರುವ ಹೊಗೆ ಪರಿಸರದ ಜನರಲ್ಲಿ ಆರೋಗ್ಯ ಸಮಸ್ಯೆ ಕಾಡ ತೊಡಗಿದೆ. ಸ್ಥಳೀಯ ಜನಪ್ರತಿನಿಧಿಗಳು ಕೇವಲ ಬಂದು ಬೇರೆ ಬೇರೆ ಭರವಸೆಯ ಮಾತುಗಳನ್ನು ಆಡುತ್ತಾರೆ ವಿನಹ ಇಲ್ಲಿಯ ನಿವಾಸಿಗಳಿಗೆ ಬೇಕಾದ ರೀತಿಯಲ್ಲಿ ಸ್ಪಂದನೆಯನ್ನು ನೀಡುತ್ತಿಲ್ಲ. ಆದ್ದರಿಂದ ಇವತ್ತು ವಿಧಾನ ಪರಿಷತ್ ಸದಸ್ಯರು ಬಂದಾಗ ಅವರ ಬಳಿ ನಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದೇವೆ. ಆದರೆ ಅವರು ಕೂಡ ಸರಿಯಾಗಿ ಸ್ಪಂದಿಸದೆ ಅಲ್ಲಿಂದ ತೆರಳಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದ್ದಾರೆ.