ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಳ್ಯಕ್ಕೊಂದು ಗುಡ್ ನ್ಯೂಸ್

0

550 ಟಿ.ವಿ.ಚಾನೆಲ್ ಸಹಿತ ಹಲವು ಸೌಲಭ್ಯದ ಜಿಯೋ ಫೈಬರ್ ಸುಳ್ಯದಲ್ಲಿ ಲೋಕಾರ್ಪಣೆ

ದ.ಕ.ದಲ್ಲೇ ಸುಳ್ಯ ನಗರ ಕೇಂದ್ರದಲ್ಲಿ ಜಿಯೋ ಪೈಬರ್ ಪ್ರಥಮ ಕೇಂದ್ರ

550 ಕ್ಕೂ ಮಿಕ್ಕಿ ಟಿವಿ ಚಾನೆಲ್ ಗಳಿರುವ, ಹೆಚ್ಚಿನ ವೇಗದ ಇಂಟರ್ ನೆಟ್, 14 ಕ್ಕೂ‌ಮಿಕ್ಕಿ ಒಟಿಟಿ ಅಪ್ಲಿಕೇಶನ್ ಸೌಲಭ್ಯದ, ಅನ್ ಲಿಮಿಟೆಡ್ ಲ್ಯಾಂಡ್ ಲೈನ್ ಕರೆಗಳಿರುವ ಸೌಲಭ್ಯದ ಜಿಯೋ ಫೈಬರ್ ಸುಳ್ಯದಲ್ಲಿ‌ ನವೆಂಬರ್ 9 ರಂದು ಲೋಕಾರ್ಪಣೆ ಗೊಂಡಿದೆ.

ಸುಳ್ಯದ ಅಂಬಟೆಡ್ಕದಲ್ಲಿರುವ ಜಿಯೋ ಪಾಯಿಂಟ್ ನಲ್ಲಿ ಜಿಯೋ ಫೈಬರ್ ಲೋಕಾರ್ಪಣೆಗೊಂಡಿತು.

ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ಕೇಕ್ ಕತ್ತರಿಸುವ ಮೂಲಕ ಜಿಯೋ ಫೈಬರ್ ಲೋಕಾರ್ಪಣೆಗೊಳಿಸಿ, ಸುಳ್ಯ‌ ಹೊಸ ಸೌಲಭ್ಯವನ್ನು ಪ್ರತೀ ಸಲವು ಬರಮಾಡಿಕೊಳ್ಳುತ್ತದೆ. ಜಿಯೋ ಫೈಬರ್ ಸೌಲಭ್ಯ ಸುಳ್ಯದ ಜನತೆಗೆ ಅತೀ ಅಗತ್ಯ. ಇದನ್ನು ಖಂಡಿತ ಬಳಸಿಕೊಳ್ಳುತ್ತಾರೆ ಎಂದು ಹೇಳಿದರು.

ಜಿಯೋ ಜೆಸಿಎಂ ಹರೀಶ್ ಪುತ್ತೂರು ಮಾತನಾಡಿ ಉಡುಪಿ ಮತ್ತು ಮಂಗಳೂರು ಅವಳಿ ಜಿಲ್ಲೆಯಲ್ಲಿ ಜಿಯೋ ಫೈಬರ್ ಕೇಂದ್ರ ಸುಳ್ಯದಲ್ಲೇ ಪ್ರಥಮ ಶಾಖೆಯನ್ನು ತೆರೆದಿದ್ದೇವೆ. ಇಲ್ಲಿಯ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.

ಮೊಬೈಲ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶೈಲೇಶ್ ಸರಳಾಯ, ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್, ಉದ್ಯಮಿಗಳಾದ ಲತೀಫ್ ಹರ್ಲಡ್ಕ, ಸತೀಶ್ ಕೆ.ಜಿ., ಸಾದೀಕ್, ಸುದ್ದಿ ವರದಿಗಾರ ಶಿವಪ್ರಸಾದ್ ಕೇರ್ಪಳ ಮುಖ್ಯ ಅತಿಥಿಗಳಾಗಿದ್ದರು.

ಸುಳ್ಯ ಪ್ರಾಂಚೈಸಿ ಮನು ಪೆರುಮುಂಡ ಹಾಗೂ ಸುಧಾಕರ ಅರಂಬೂರು ಅತಿಥಿಗಳನ್ನು ಬರಮಾಡಿಕೊಂಡರು.ಜಿಯೋ ಪೈಬರ್ ಮ್ಯಾನೇಜರ್ ಕಿರಣ್ ಕುಮಾರ್ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಅಕ್ಷಯ್ ಕೆ.ಸಿ. ಪ್ರಥಮ ಗ್ರಾಹಕ : ನ.9 ರಂದು ಸುಳ್ಯದಲ್ಲಿ ಲೋಕಾರ್ಪಣೆಗೊಂಡ ಜಿಯೋ ಪೈಬರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಯವರು ಪ್ರಥಮ ಗ್ರಾಹಕರಾಗಿದ್ದರು.

ಅಂಬಟೆಡ್ಕದ ಜಿಯೊ ಪಾಯಿಂಟ್ ನಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿದ ಬಳಿಕ ಅಕ್ಷಯ್ ಕೆ.ಸಿ.ಯವರ ಮನೆಗೆ ತೆರಳಿ ಅಲ್ಲಿ ಜಿಯೋ ಪೈಬರ್ ಕನೆಕ್ಷನ್ ನೀಡಲಾಯಿತು. ಅಲ್ಲದೆ ಅಕ್ಣಯ್ ರವರ ಹುಟ್ಟು ಹಬ್ಬಕ್ಕಾಗಿ ಜಿಯೋ ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಸಿಬ್ಬಂದಿಗಳಿಗೆ ಗೌರವ : ಜಿಯೋ ಪೈಬರ್ ಕೇಬಲ್ ಅಳವಡಿಕೆ ಹಾಗೂ ತಾಂತ್ರಿಕ ವಿಭಾಗದಲ್ಲಿ ದುಡಿದಿರುವ ಸಿಬ್ಬಂದಿಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಸುಳ್ಯ‌ ನಗರದ ಕೇಂದ್ರ ಸ್ಥಾನದಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಜಿಯೋ ಫೈಬರ್ ಕೇಬಲ್ ಅಳವಡಿಸಲಾಗಿದೆ. ಯಾವುದೇ ಸೆಕ್ಯೂರಿಟಿ ಡೆಪಾಸಿಟ್ ಇಲ್ಲದೆ, ಯಾವುದೇ ಇನ್ಸ್ಟಾಲೇಷನ್ ಶುಲ್ಕವಿಲ್ಲದೆ ಶೂನ್ಯ ಪ್ರವೇಶ ವೆಚ್ಚದಲ್ಲಿ ಅಳವಡಿಸಲಾದೆ ಎಂದು ಪ್ರಾಂಚೈಸಿಯವರು ತಿಳಿಸಿದ್ದಾರೆ.