ಸಂಪಾಜೆ ವಲಯಾರಣ್ಯಾಧಿಕಾರಿ ಮಧುಸೂದನ್ ಕೊಡಗಿನ ತಿತಿಮತಿಗೆ ವರ್ಗಾವಣೆ

0

ಸಂಪಾಜೆ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಮನಗರದ ಮಧುಸೂದನ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿಗೆ ವರ್ಗಾವಣೆಗೊಂಡಿದ್ದಾರೆ.

2012ರಲ್ಲಿ ವಲಯಾರಣ್ಯಾಧಿಕಾರಿ ತರಬೇತಿ ಪಡೆದು 2014ರಲ್ಲಿ ಮಲೆಮಹದೇಶ್ವರದಲ್ಲಿ ಎರಡು ವರ್ಷಗಳ ಕಾಲ, ನಾಗರಹೊಳೆಯಲ್ಲಿ ಮೂರು ವರ್ಷ, ಮಂಡ್ಯದ ಕೆ.ಆರ್. ನಗರದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ, ಕಳೆದ 2019ರಲ್ಲಿ ಸಂಪಾಜೆ ವಲಯಾರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

ಸಂಪಾಜೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕಛೇರಿಯ ತಡೆಗೋಡೆ ನಿರ್ಮಾಣ, ಸಿಬ್ಬಂದಿಗಳ ವಸತಿಗೃಹ ದುರಸ್ತಿ, ಶಾಲಾ ಮಕ್ಕಳಿಗೆ ಅರಣ್ಯ ಇಲಾಖೆಯ ಸಹಕಾರದಿಂದ ಪ್ರವಾಸ ಕ್ಕೆ ಸಹಕಾರ ನೀಡಿದ್ದಾರೆ.


ಅರಣ್ಯ ಇಲಾಖೆಯ ನರ್ಸರಿಯಲ್ಲಿ ಅಳಿವಿನಂಚಿನಲ್ಲಿರುವ ಸಸಿಗಳನ್ನು ಸಂಗ್ರಹಿಸಿ, ಕೃಷಿಕರಿಗೆ ವಿತರಿಸುವ ಕೆಲಸ ಮಾಡಿದ್ದಾರೆ. ಅರಣ್ಯ ಇಲಾಖೆಯ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಬ್ಬೇವು ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಧುಸೂದನ್ ಅವರು ಅತ್ಯಂತ ನಿಷ್ಠಾವಂತ ಅಧಿಕಾರಿಯೆಂದು ಗ್ರಾಮಸ್ಥರಿಗೆ ಶ್ಲಾಘನೆಗೆ ಒಳಗಾಗಿದ್ದು, ಇವರನ್ನು ಹಲವು ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ, ಗೌರವಿಸಲಾಗಿದೆ.


ಇವರ ಪತ್ನಿ ಶ್ರೀಮತಿ ಗಾನಶ್ರೀ ಅವರು ಸುಳ್ಯದ ಕೆ.ಎಫ್.ಡಿ.ಸಿ. ಇಲಾಖೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಶನಿವಾರ ಸಂತೆಯಲ್ಲಿ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.