ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಸಹಕಾರಿ ಸಪ್ತಾಹ ಮತ್ತು ಬೆಳ್ಳಿಹಬ್ಬದ ಪ್ರಯುಕ್ತ ಕ್ರೀಡಾಕೂಟ

0

ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದ ವತಿಯಿಂದ ಸಹಕಾರಿ ಸಪ್ತಾಹ ಮತ್ತು ಸೊಸೈಟಿಯ ಬೆಳ್ಳಿಹಬ್ಬದ ಪ್ರಯುಕ್ತ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಗೆ, ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದವರಿಗೆ ಕ್ರೀಡಾಕೂಟವು ಎಲಿಮಲೆ ಪ್ರೌಢ ಶಾಲಾ ಕ್ರೀಡಾಗಣದಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ವಹಿಸಿದ್ದರು.
ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹರೀಶ್ ಕಂಜಿಪಿಲಿ ರಿಬ್ಬನ್ ತುಂಡರಿಸಿ ಕ್ರೀಡಾಂಗಣ ಉದ್ಘಾಟಿಸಿದರು.
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಥಳದಾನಿಗಳಾದ ಸೋಮಶೇಖರ ಕೇಪಳಕಜೆ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ ಸಹಕಾರ ಧ್ವಜ ಬೀಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ದೈಹಿಕ ಶಿಕ್ಷಣ ಶಿಕ್ಷಕಿ ತಿರುಮಲೇಶ್ವರಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂತೋಷ್ ಎನ್. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಉಮೇಶ್ ಪ್ರಭು ವಂದಿಸಿದರು. ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿ, ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಪಿ. ಸಿ. ಜಯರಾಮ, ಸಿ. ಎ. ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ, ಚೊಕ್ಕಾಡಿ ಸೊಸೈಟಿಯ ಅಧ್ಯಕ್ಷ ಕೇಶವ ಕರ್ಮಾಜೆ, ಮಂಡೆಕೋಲು ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ,ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಗುತ್ತಿಗಾರು ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕಳಂಜ ಬಾಳಿಲ ಸೊಸೈಟಿ ಅಧ್ಯಕ್ಷ ಕೂಸಪ್ಪ ಗೌಡ,
ಸೊಸೈಟಿ ನಿರ್ದೇಶಕರಾದ ಶುಭಕರ ನಾಯಕ್ ಬೊಳ್ಳಾಜೆ, ದೇವಿಪ್ರಸಾದ್ ಸುಳ್ಳಿ, ಸತ್ಯೇಶ್ ಚಂದ್ರೋಡಿ, ಹರೀಶ್ ಸುಳ್ಳಿ, ತೀರ್ಥಕುಮಾರ್ ಟಿ., ಚಂದ್ರ ದಾಸನಕಜೆ, ಇಂದಿರಾ ಎರ್ಮೆಟ್ಟಿ, ಸಂಧ್ಯಾ ಪುನುಕುಟ್ಟಿ, ಡಿಸಿಸಿ ಬ್ಯಾಂಕ್‌ನ ಸುಳ್ಯ ವಲಯದ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ಸುಳ್ಯ ತಾಲೂಕು ನವೋದಯ ಸಂಘಗಳ ಮೆಲ್ವಿಚಾರಕ ಶ್ರೀಧರ ಮಾಣಿಮರ್ಧು, ನವೋದಯ ಪ್ರೇರಕಿ ದೇವಕಿ, ನೆಲ್ಲೂರು ಕೆಮ್ರಾಜೆ ಗ್ರಾ. ಪಂ. ಉಪಾಧ್ಯಕ್ಷೆ ವಂದನಾ ಹೊಸ್ತೋಟ, ಸದಸ್ಯರಾದ ವೇಣುಗೋಪಾಲ ಪುನುಕುಟ್ಟಿ, ವೇಣುಗೋಪಾಲ ತುಂಬೆತ್ತಡ್ಕ, ರಾಮಚಂದ್ರ ಪ್ರಭು ಹಾಗೂ ತಾಲೂಕಿನ ವಿವಿಧ ಸೊಸೈಟಿ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹೇಮಾನಾಥ ಕೋಡ್ತುಗುಳಿ, ಓಂಪ್ರಸಾದ್ ಕಜೆ, ಮುರಳೀಧರ ಪುನುಕುಟ್ಟಿ, ರಾಂ ಭಟ್, ಹರಿಪ್ರಸಾದ್ ಕಜೆ, ಪುರುಷೋತ್ತಮ ಸುಳ್ಳಿ ಮತ್ತಿತರರು ಸಹಕರಿಸಿದರು. ಗದಾಧರ ಬಾಳುಗೋಡು, ದಿವ್ಯ ಬಾಳುಗೋಡು, ತಿರುಮಲೇಶ್ವರಿ, ರಮೇಶ್,ಮಾಯಿಲಪ್ಪರವರು ನಿರ್ಣಾಯಕರಾಗಿ ಸಹಕರಿಸಿದರು.