ಈಜು ಸ್ಪರ್ಧೆ : ಲಾಸ್ಯ ಕಿಶನ್ ದೇರಪ್ಪಜ್ಜನಮನೆ SGPI ಗೆ ಆಯ್ಕೆ

0

ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ರಾಜ್ಯ ಮಟ್ಡದ ಈಜು ಸ್ಪರ್ಧೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ ಗುತ್ತಿಗಾರಿನ ದೇರಪ್ಪಜ್ಜನಮನೆಯ ಕಿಶನ್ ಹಾಗೂ ದೀನಾ ಕಿಶನ್ ದಂಪತಿಗಳ ಪುತ್ರಿ ಕು: ಲಾಸ್ಯ ಕಿಶನ್ ದೇರಪ್ಪಜ್ಜನಮನೆಯವರು ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಹಾಗೂ 50 ಮೀಟರ್ ಪ್ರೀಸ್ಟೈಲ್ ನಲ್ಲಿ ಬೆಳ್ಳಿಪದಕಗಳೊಂದಿಗೆ SGFI (School Games Federation of India)ಗೆ ಆಯ್ಕೆಯಾಗಿರುತ್ತಾರೆ.


ಪ್ರಸಕ್ತ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಲಾಸ್ಯ, ಪುತ್ತೂರಿನ ಶಿವರಾಮ ಕಾರಂತ ಬಾಲವನದ ಈಜು ತರಬೇತಿ ಕೇಂದ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ತರಬೇತುದಾರ ದೀಕ್ಷಿತ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.