ಐನೆಕಿದು: ಗ್ರಾಮ ಗೌಡ ಸಮಿತಿಯಿಂದ ದೀಪಾವಳಿ ಆಚರಣೆ

0

ಗ್ರಾಮ ಗೌಡ ಸಮಿತಿ ಐನೆಕಿದು ವತಿಯಿಂದ ನ.15 ರಂದು ದೀಪಾವಳಿ ಆಚರಣೆ ಮಾಡಲಾಯಿತು. ಗ್ರಾಮ ಗೌಡ ಸಮಿತಿಯ ಅಧ್ಯಕ್ಷರಾದ
ದಾಮೋದರ ಗೌಡ ಕೂಜುಗೋಡು ಕಟ್ಟೆಮನೆ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಊರು ಗೌಡರಾದ ನರೇಂದ್ರ ಕೂಜುಗೋಡು ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಗೌಡ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಎಸ್ ಅರ್ ಕೆ ಇದರ ಮಾಲಕ ಕೇಶವ ಅಮೈ, ಧರ್ಮಪಾಲ ಗೌಡ ಕಣ್ಕಲ್, ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ತರುಣ ಘಟಕದ ಕಿರಣ್ ಪೈಲಾಜೆ, ತರುಣ ಘಟಕ ಕಾರ್ಯದರ್ಶಿ ಪ್ರಧಾನ್ ಕೂಜುಗೋಡು ಕಟ್ಟೆ ಮನೆ ಉಪಸ್ಥಿತರಿದ್ದರು. ಈ ಸಂದರ್ಭ ಹೈನುಗಾರಿಕೆಯಲ್ಲಿ ಮಾದರಿ ಯಾಗಿ, ಕೃಷಿಕರಾಗಿದ್ದು ಶ್ರಮಜೀವಿಯಾದ ಸವಿತಾ ಕೋಡಿಯಡ್ಕ ರವರನ್ನು ಗುರುತಿಸಿ ಗೌರವಿಸಲಾಯಿತು. ಪ್ರೀತಿಕಾ ಕೋನಡ್ಕ ಹಾಗೂ ವೇದಿಕ ಕೆದಿಲ ಪ್ರಾರ್ಥನೆ ಮಾಡಿದರು. ಕಿಶೋರ್ ಕೂಜುಗೋಡು ಸ್ವಾಗತಿಸಿ, ಜಯಪ್ರಕಾಶ್ ಕೂಜುಗೋಡು ವಂದಿಸಿದರು. ನವೀನ್ ಕಟ್ರಮನೆ ಕಾರ್ಯಕ್ರಮ ನಿರೂಪಿಸಿದರು.