ನಿಂತಿಕಲ್ಲಿನ ಕೆ.ಎಸ್ ಗೌಡ ವಿದ್ಯಾಸಂಸ್ಥೆಗೆ ಹಲವು ಪದಕಗಳು, ಆರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಬಾಲಕ – ಬಾಲಕಿಯರ ಕ್ರೀಡಾ ಕೂಟದಲ್ಲಿ ನಿಂತಿಕಲ್ಲಿನ ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು 6 ಚಿನ್ನ, 2 ಬೆಳ್ಳಿ, ಹಾಗೂ 4 ಕಂಚಿನ ಪದಕಗಳನ್ನು ಗೆದ್ದು ಒಟ್ಟು 12 ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಪ್ರಥ್ವಿ ದ್ವಿತೀಯ ವಿಜ್ಞಾನ ವಿಭಾಗ ( ಈಟಿ ಎಸೆತ, 800ಮೀಓಟ, 4400 ಮೀ ರಿಲೇ ಚಿನ್ನ ಹಾಗೂ ಎತ್ತರ ಜಿಗಿತ ಕಂಚು) , ಶ್ರುದ್ಧೀ ಪ್ರಥಮ ವಾಣಿಜ್ಯ ವಿಭಾಗ( ತ್ರಿವಿಧ ಜಿಗಿತ, 4400ರಿಲೇ ಚಿನ್ನ, 100 ಮೀ ಓಟ ಬೆಳ್ಳಿ) ತ್ರಷಾ ದ್ವಿತೀಯ ವಿಜ್ಞಾನ ವಿಭಾಗ( 400 ಮೀ ಓಟದ, 4004 ಮೀ ರಿಲೇ ಚಿನ್ನ, 200 ಮೀ ಓಟ ಕಂಚು) ಹಿತಾಶ್ರೀ ದ್ವಿತೀಯ ವಾಣಿಜ್ಯ (4400ರಿಲೇ ಚಿನ್ನ,) ಸ್ರುಜನ್ ದ್ವಿತೀಯ ವಾಣಿಜ್ಯ ವಿಭಾಗ (ಈಟಿ ಎಸೆತ ಚಿನ್ನ) ಮೊಹಮ್ಮದ್ ಅನೀಸ್ ದ್ವಿತೀಯ ವಾಣಿಜ್ಯ ( ಗುಂಡು ಎಸೆತ ಬೆಳ್ಳಿ) ಶ್ರೀರಾಜ್ ದ್ವಿತೀಯ ವಿಜ್ಞಾನ (110 ಮೀ ಹರ್ಡಲ್ಸ್ ಕಂಚು) ಆಶಿಕಾ ಪ್ರಥಮ ವಿಜ್ಞಾನ ವಿಭಾಗ (ಹ್ಯಾಮರ್ ಎಸೆತ ಕಂಚು) ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರಿಗೆ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಹಾಗೂ ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ ಎಚ್ ತರಬೇತಿ ನೀಡುತ್ತಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗಳನ್ನು ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ ಎಸ್ ಅಭಿನಂದಿಸಿದ್ದಾರೆ.