ಪಂಜದಲ್ಲಿ ಸುಳ್ಯ ,ಕಡಬ, ಪುತ್ತೂರು ತಾಲೂಕುಗಳ ಹಿರಿಯರ 10ನೇ ಕ್ರೀಡಾಕೂಟ

0

ಸಂಘಟನಾ ಸಮಿತಿ, ಸುಳ್ಯ, ಕಡಬ, ಪುತ್ತೂರು ತಾಲೂಕುಗಳ ಹಿರಿಯರ 10ನೇ ಕ್ರೀಡಾಕೂಟ, ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ ಇದರ ವತಿಯಿಂದ ತಾಲೂಕು ಹಿರಿಯರ ಕ್ರೀಡಾಕೂಟ -2023
ನ.19 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ
ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್ ದೀಪ ಪ್ರಜ್ವಲನೆ ಗೊಳಿಸಿ ಮಾತನಾಡಿ.”ಆರೋಗ್ಯಕ್ಕಾಗಿ ಬಾಲ್ಯದಿಂದಲೇ ಕ್ರೀಡೆಗಳನ್ನು ಅಳವಡಿಸಿ ಕೊಳ್ಳ ಬೇಕು.ಕ್ರೀಡೆಗಳನ್ನು ಉಳಿಸಿ ಬೆಳೆಸಿ”.ಎಂದು ಅವರು ಹೇಳಿದರು
.

ಧ್ವಜಾರೋಹಣಗೈದು ಪಂಜ ನಾಡಕಚೇರಿ ಉಪತಹಶೀಲ್ದಾರ್ ಚಂದ್ರಕಾಂತ ಎಮ್. ಆರ್ ಮಾತನಾಡಿ “ಸಾರ್ವಜನಿಕ ಕ್ರೀಡಾ ಕೂಟ ಆಯೋಜನೆಯಿಂದ ಎಲ್ಲರಲ್ಲೂ ಕ್ರೀಡಾ ಆಸಕ್ತಿ, ಕ್ರೀಡಾ ಮನೋಭಾವ ಬೆಳೆಯಲು ಕಾರಣವಾಗುತ್ತದೆ. ಕ್ರೀಡೆಗಳನ್ನು ಬೆಳೆಸಲು ಸರಕಾರ ಕೂಡ ವಿಶೇಷ ಪ್ರೋತ್ಸಾಹ ನೀಡುತ್ತಿದೆ”ಎಂದು ಅವರು ಹೇಳಿದರು.

ಅತಿಥಿ ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ “ಕ್ರೀಡೆಗಳಿಂದ ಮನುಷ್ಯನ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಇಂತಹ ಕೂಟಗಳಿಂದ ಮುಂದಿನ ಜನಾಂಗಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ.”ಎಂದು ಅವರು ಹೇಳಿದರು.
ಹಿರಿಯರ ಕ್ರೀಡಾಕೂಟ-2023ಸಂಘಟನಾ ಸಮಿತಿ ಅಧ್ಯಕ್ಷ ರವಿಕುಮಾರ್ ಚಳ್ಳಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಪ್ರಗತಿಪರ ಕೃಷಿಕ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ,
ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ,ಸುಳ್ಯ ವಿಷನ್ ಚಾರಿಟೇಬಲ್ ಟ್ರಸ್ಟ್, ಪಿಂಚಣಿದಾರರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ರಂಗಯ್ಯ , ಸುಳ್ಯ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಚೆನ್ನಕೇಶವ,ಜಿಲ್ಲಾ ಹಿರಿಯರ ಕ್ರೀಡಾಕೂಟ ಪದಾಧಿಕಾರಿ ಆನಂದ ಸೋನ್ಸ್ ಹಾಗೂ ಸುಳ್ಯ ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ಗೌರವಾಧ್ಯಕ್ಷ ತುಕಾರಾಮ ಏನೆಕಲ್ಲು,ಕಡಬ ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಮೋಹನ ಕೆರೆಕ್ಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಜಾನೆ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ತೆಂಗಿನ ಕಾಯಿ ಒಡೆದು ಕ್ರೀಡಾ ಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿದರು . ಶಶಿಧರ ಪಳಂಗಾಯ ನಿರೂಪಿಸಿದರು. ಮೋಹನ ಕೆರೆಕ್ಕೋಡಿ ವಂದಿಸಿದರು.