ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮೆನ್ಸ್‌ಡೇ ಆಚರಣೆ

0


ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆ ಇದರ ವತಿಯಿಂದ ಪುರುಷರು ಶೂನ್ಯ ಆತ್ಮಹತ್ಯೆ ಎಂಬ ಧ್ಯೇಯದೊಂದಿಗೆ ಅಂತರಾಷ್ಟ್ರೀಯ ಮೆನ್ಸ್ ಡೇ ಕಾರ್ಯಕ್ರಮ ಕೆವಿಜಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನ.೨೦ ರಂದು ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿ ಇದರ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿನ್ನರ್ ಇನ್ಸ್ಟಿಟ್ಯೂಟ್ ನ ಡಾ.ಭರತ್ ಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷೆ ಶೋಭ ಚಿದಾನಂದ ಕೆವಿಜಿ ಮಹಾವಿದ್ಯಾಲಯದ ಡೀನ್ ನಿಲಾಂಬಿಕ ನಟರಾಜನ್,ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೆನ್ಸ್ ಡೇ ಪ್ರಯುಕ್ತ ಕೆವಿಜಿ ಮೆಡಿಕಲ್ ಕಾಲೇಜಿನ ಎಲ್ಲಾ ಪುರುಷ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಸ್ವಸ್ತ ಪುರುಷ ಆರೋಗ್ಯ ಶಿಬಿರದ ಬಗ್ಗೆ ಕೆವಿಜಿ ಮೆಡಿಕಲ್ ಕಾಲೇಜು ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಸಿ ರಾಮಚಂದ್ರ ಭಟ್ ಮಾಹಿತಿ ನೀಡಿದರು.

ಕೆವಿಜಿ ಅರೋಗ್ಯ ಕಾರ್ಡ್ ಬಿಡುಗಡೆ
ಕೆವಿಜಿ ಸಮೂಹ ಸಂಸ್ಥೆಗಳ ಉದ್ಯೋಗಿಗಳಿಗೆ ಅರೋಗ್ಯ ಕಾರ್ಡ್ ಅನಾವರಣಗೊಳಿಸಲಾಯಿತು.
ಕೆವಿಜಿ ಸಮೂಹ ಸಂಸ್ಥೆಗಳ ಉದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಕ್ಷಯ್ ಕೆ. ಸಿ. ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಉದ್ಯೋಗಿಗಳಾಗಿ ಸೇವೆಸಲ್ಲಿಸುತ್ತಿದ್ದ ಹಿರಿಯ ಉದ್ಯೋಗಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೀರ್ಥೇಶ್ ಪಾರೆಪ್ಪಾಡಿ ಸ್ವಾಗತಿಸಿ,ಶಶಿಕಾಂತ್ ಮಿತ್ತೂರು ವಂದಿಸಿದರು.
ಸೀನಿಯರ್ ಹೆಚ್ ಆರ್ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.