ಮರ್ಕಂಜ : ಮಿನುಂಗೂರು ದೇವಸ್ಥಾನದ ಜೀರ್ಣೋದ್ಧಾರ ಆರಂಭ ಇಂದು ಬಾಲಾಲಯ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ

0

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಕಾರಣಿಕ ಕ್ಷೇತ್ರ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಗೊಳ್ಳಲಿದ್ದು, ಆ ಪ್ರಯುಕ್ತ ಬಾಲಾಲಯ ಪ್ರತಿಷ್ಠೆಯು ಇಂದು (ನ.20) ನಡೆಯಿತು. ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಪದ್ಮನಾಭ ತಂತ್ರಿಗಳು ವೈಧಿಕ ಕಾರ್ಯಕ್ರಮ ನೆರವೇರಿಸಿದರು. ಮುಂಜಾನೆ ಗಣಪತಿ‌ ಪ್ರಾರ್ಥನೆ, ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ ಹಾಗೂ ಮಧ್ಯಾಹ್ನ 11.30ರಿಂದ 12.30ರ ಮಕರ ಲಗ್ನದಲ್ಲಿ ಶ್ರೀ ದುರ್ಗಾಪರಮೇಶ್ವರಿ, ಗಣಪತಿ ಮತ್ತು ಶಾಸ್ತರ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡಲಾಯಿತು. ಬಳಿಕ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಹಾಗೂ ಹೋರಿಯ‌ ಮೂಲಕ ದೇವಸ್ಥಾನದ ಮಾಡಿನ‌ ಹಂಚು ತೆಗೆಯುವುದರ ಮೂಲಕ‌ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಯಿತು. ಬಾಲಾಲಯ ಪ್ರತಿಷ್ಠೆಯ ಬಳಿಕ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ತಂತ್ರಿಗಳು ಇನ್ನು ಮುಂದೆ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠೆ ನಡೆಯುವವರೆಗೆ ಬಾಲಾಲಯದಲ್ಲಿರುವ ದೇವರಿಗೆ ಬೆಳಗ್ಗಿನ‌ ಸಮಯದಲ್ಲಿ ಮಾತ್ರ ಪೂಜೆ ನಡೆಯಲಿದೆ. ಶುಕ್ರವಾರದ ಭಜನಾ‌ ಕಾರ್ಯಕ್ರಮ ಎಂದಿನಂತೆ‌ ನಡೆಯಲಿದೆ‌. ಹಾಗೂ ಗಣಹೋಮ, ಸತ್ಯನಾರಾಯಣ ಪೂಜೆಗಳು ಬಾಲಾಲಯದ ಆವರಣದಲ್ಲಿ‌ ನಡೆಸಬಹುದು.‌ ಉಳಿದಂತೆ ದುರ್ಗಾಪೂಜೆಯನ್ನು ಹೊರತುಪಡಿಸಿ ಹರಿಣ ಸೇವೆಯಂತಹ ವಿಶೇಷ ಸೇವೆಗಳು‌‌ ನಡೆಯುವುದಿಲ್ಲ. ಪುನರ್ ಪ್ರತಿಷ್ಠೆ ನಡೆಯುವವರೆಗೆ ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಲ್ಲಿ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುವಂತಿಲ್ಲ. ಈಗಾಗಲೇ ಹಮ್ಮಿಕೊಂಡ ಶುಭ ಕಾರ್ಯಗಳನ್ನು ನಡೆಸಬಹುದು ಎಂದು ಹೇಳಿದರು.‌ ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸೇವಾ ಸಮಿತಿ ಅಧ್ಯಕ್ಷ ಕಮಾಲಕ್ಷ ಪುರ, ಭಜನಾ ಸಂಘದ‌ ಅಧ್ಯಕ್ಷ ಮಹೇಶ್ ಪುರ, ವ್ಯವಸ್ಥಾಪನಾ‌ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ನಾಯ್ಕ‌ ತೋಟಚಾವಡಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಗೋವಿಂದ ಅಳವುಪಾರೆ ಸೇರಿದಂತೆ ವ್ಯವಸ್ಥಾಪನ ಸಮಿತಿ ಸದಸ್ಯರು, ದೇವಳದ ವಿವಿಧ ಸಮಿತಿಯ ಸದಸ್ಯರುಗಳು, ಅರ್ಚಕ ವೃಂದವರು ಕ್ಷೇತ್ರದ ಭಕ್ತಾಧಿಗಳು ಉಪಸ್ಥಿತರಿದ್ದರು.