ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿ ದೀಪಾಂಜಲಿ ಮಹಿಳಾ ಮಂಡಲ ಶಾಂತಿನಗರ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳಿಗೆ ತರಗತಿವಾರು ವಿಧವಿಧದ ಆಟಗಳನ್ನು ಆಡಿಸಿ ಬಹುಮಾನದ ಪ್ರಾಯೋಜಕತ್ವವನ್ನು ದೀಪಾಂಜಲಿ ಮಹಿಳಾ ಮಂಡಲದವರು ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕಿ ಇಮ್ನಾಪಾತಿಮ ವಹಿಸಿದ್ದರು.
ಗೌರವ ಉಪಸ್ಥಿತಿಯಾಗಿ 5ನೇ ತರಗತಿಯ ಶರಣ, ಒಂದನೇ ತರಗತಿಯ ಲಿಫಾ ಹಾಗೂ ಸಮಾರಂಭದಲ್ಲಿ ದೀಪಾಂಜಲಿ ಮಹಿಳಾ ಮಂಡಳಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಸಿಹಿಯನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇವರು ಕೊಡುಗೆಯಾಗಿ ನೀಡಿದರು.