ವಿವಿಧ ಬೇಡಿಕೆಗೆ ಆಗ್ರಹಿಸಿ ಸುಳ್ಯ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ನಾಳೆ ನ. 22 ರಂದು ಸುಳ್ಯ ತಾಲೂಕಿನಲ್ಲಿ ಅಂಗನವಾಡಿ ಬಂದ್ ಗೆ ಕರೆ ನೀಡಿದೆ.
ಹಲವು ವರ್ಷಗಳಿಂದ ನಾವು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ.
ಆದರೂ ಇನ್ನೂ ಯಾವುದೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಹೀಗಾಗಿ ಅಂಗನವಾಡಿ ಬಂದ್ ಮಾಡುತ್ತಿದ್ದೇವೆ ಎಂದು ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಸುಳ್ಯ ತಾಲೂಕು ಅಧ್ಯಕ್ಷೆ ಲತಾ ಅಂಬೆಕಲ್ಲು ತಿಳಿಸಿದ್ದಾರೆ.