ಬಿ.ಇ.ಒ. ಕಚೇರಿ ಎದುರು ಪೈಪ್ ಒಡೆದು ನೀರು ಪೋಲಾಗುತಿದ್ದ ಸಮಸ್ಯೆಗೆ ಪರಿಹಾರ
ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು, ಪಕ್ಕದ ರಸ್ತೆಯಾಗಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿರುವ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಅದನ್ನು ಸರಿ ಪಡಿಸುವ ಕಾರ್ಯ ನಡೆದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪಕ್ಕದ ರಸ್ತೆಯ ಬದಿಯಿಂದಾಗಿ ನೀರು ಸರಬರಾಜು ಪೈಪ್ ಹಾಕಲಾಗಿತ್ತು. ಈ ಪೈಪ್ ಲೀಕೇಜ್ ನಿಂದಾಗಿ ನೀರು ಪೋಲಾಗುತ್ತಿದುದಲ್ಲದೆ, ಆ ನೀರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಸಂಗ್ರಹ ವಾಗುತಿತ್ತು. ಇದರಿಂದಾಗಿ ಕಚೇರಿಗೆ ಬರುವವರಿಗೆ ತೊಂದರೆಯಾಗಿತ್ತು. ನ.23 ರಂದು ಮಧ್ಯಾಹ್ನದ ವೇಳೆಗೆ ಸುದ್ದಿವೆಬ್ ಸೈಟ್ ನಲ್ಲಿ ನೀರು ಪೋಲಾಗುವ ಮತ್ತು ಅದರಿಂದ ಆಗುವ ಸಮಸ್ಯೆಯ ಕುರಿತು ವರದಿ ಪ್ರಸಾರವಾಗಿತ್ತು. ನ.24 ರಂದು ಬೆಳಗ್ಗೆ ಗುತ್ತಿಗೆದಾರರು ತಮ್ಮ ಕೆಲಸದವರೊಂದಿಗೆ ಬಂದು ನೀರು ಹೊರಬರುತ್ತಿರುವಲ್ಲಿ ಅಗೆದು ಸರಿ ಪಡಿಸುವ ಕಾರ್ಯ ಮಾಡಿದರೆಂದು ತಿಳಿದುಬಂದಿದೆ.