ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಶಮಾನೋತ್ಸವದ ಪ್ರಯುಕ್ತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಪ್ರಯುಕ್ತ ಆವರಣ ಗೋಡೆ, ರಂಗಮಂದಿರ ಮತ್ತು ಶಾಲೆಗೆ ಟೈಲ್ಸ್ ಅಳವಡಿಕೆ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮವು ಇಂದು ನಡೆಯಿತು.
ಆವರಣ ಗೋಡೆಯ ಗುದ್ದಲಿಪೂಜೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ನೆರವೇರಿಸಿದರು.
ರಂಗಮಂದಿರ ಕಾಮಗಾರಿಯ ಗುದ್ದಲಿಪೂಜೆಯನ್ನು ಉದ್ಯಮಿಗಳಾದ ಉಮೇಶ್ ಮುಂಡೋಡಿ ಕೆನಡಾರವರು ನೆರವೇರಿಸಿದರು.
ಶಾಲೆಗೆ ಟೈಲ್ಸ್ ಅಳವಡಿಕೆಯ ಕಾಮಗಾರಿಯನ್ನು ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಪುರುಷ ದೈವದ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾಪ್ರಸಾದ್ ಮುಂಡೋಡಿ ನೆರವೇರಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ವಹಿಸಿದ್ದರು.
ವೇದಿಕೆಯಲ್ಲಿ ಶೈಲೇಶ್ ಅಂಬೆಕಲ್ಲು, ಉಮೇಶ್ ಮುಂಡೋಡಿ ಕೆನಡಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕೆ., ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲಪ್ಪ ರುದ್ರಚಾಮುಂಡಿ, ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ದೇವಚಳ್ಳ ಗ್ರಾ.ಪಂ. ಸದಸ್ಯ ಭವಾನಿಶಂಕರ ಮುಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಸ್ವಾಗತಿಸಿದರು.
ಶಾಲಾ ಶಿಕ್ಷಕ ಅಜಯ್ ಸಭಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರದಲ್ಲಿ ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ,
ಟಿಎಪಿಸಿಎಂಎಸ್ ಉಪಾಧ್ಯಕ್ಷರಾದ ಕಿಶೋರ್ ಅಂಬೆಕಲ್ಲು, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಪುರುಷೋತ್ತಮ ಮುಂಡೋಡಿ, ಗುತ್ತಿಗಾರು ಅಮರ ಚಾರಿಟೇಬಲ್ ನ ಚಂದ್ರಶೇಖರ ಕಡೋಡಿ, ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘ ಕುಕ್ಕುಜಡ್ಕ ಇದರ ಮ್ಯಾನೇಜರ್ ಮೋಹನ ಪೊಯ್ಯಮಜಲು, ಪ್ರಮುಖರಾದ ವೇಣುಕುಮಾರ್ ಚಿತ್ತಡ್ಕ, ಪ್ರಕಾಶ್ ಮುಂಡೋಡಿ, ನಾಗೇಶ್ ಮುಂಡೋಡಿ, ಬಿಜೇಶ್ ಹಿರಿಯಡ್ಕ, ಪ್ರೀತಮ್ ಮುಂಡೋಡಿ, ಗಿರಿಧರ ಅಂಬೆಕಲ್ಲು, ಶಿವರಾಮ ತಂಬ್ಲುಪಜೆ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಯವರು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ನಡೆಸಿದ ಲಂಚ ಭ್ರಷ್ಟಾಚಾರ ವಿರುದ್ಧ ಯುವಜನರ ಪಾತ್ರ ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಬಹುಮಾನ ವಿತರಿಸಿದರು.