ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಬಿದ್ದ ಕಾರು

0

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯಿಂದ ಕೆಳಕ್ಕೆ ಬಿದ್ದ ಘಟನೆ ಇಂದು ಬೆಳಿಗ್ಗೆ ಗುತ್ತಿಗಾರು – ಸುಬ್ರಹ್ಮಣ್ಯ ರಸ್ತೆಯ ಬದಿ ಮರಕತ ತಿರುವು ಸಮೀಪ ನಡೆದಿದೆ.
ಬೈಕಲ್ಲಿ ಹೋಗುತ್ತಿದ್ದವರ ವೇಲ್ ಚಕ್ರಕ್ಕೆ ಸಿಲುಕುವ ಸಾಧ್ಯತೆಯನ್ನು ಕಂಡ ಕಾರು ಚಾಲಕ, ಬೈಕ್ ಸವಾರನನ್ನು ಎಚ್ಚರಿಸಿ ಎದುರು ತಿರುಗಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಹೋಗಿತ್ತೆನ್ನಲಾಗಿದೆ. ನಂತರ ಕಾರನ್ನು ನಿಯಂತ್ರಣ ಮಾಡಲು ಅಸಾಧ್ಯವಾಯಿತೆನ್ನಲಾಗಿದ್ದು, ಕೆಳಗುರುಳಿದ ಕಾರಿಗೆ ಜಖಂ ಆಗಿದೆ. ಪುಣ್ಯವಶಾತ್ ಕಾರು ಚಲಾಯಿಸುತ್ತಿದ್ದ ಯುವಕ ಗಾಯಗಳಿಲ್ಲದೆ ಪಾರಾಗಿದ್ದಾರೆ.