ಪಂಜ ಪ್ರಾ.ಕೃ. ಪ.ಸಹಕಾರ ಸಂಘದ -ಶತಮಾನೋತ್ತರ ದಶಮಾನೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0


⬆️ ದ.16: ಶತಮಾನೋತ್ತರ ದಶಮಾನೋತ್ಸವ ಸಂಭ್ರಮ

⬆️ ದ.12: ಸದಸ್ಯರಿಗೆ ರಸ ಪ್ರಶ್ನೆ,ಹಗ್ಗಜಗ್ಗಾಟ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮವು ದ.16 ರಂದು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ. 28 ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಪೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷ ಕೆ. ರಘುನಾಥ ರೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,
ಶ್ರೀಕೃಷ್ಣ ಭಟ್ ಪಟೋಳಿ, ವಾಚಣ್ಣ ಕೆರೆಮೂಲೆ,ಚಿನ್ನಪ್ಪ ಗೌಡ ಚೊಟ್ಟೆಮಜಲು,ಕಿಟ್ಟಣ್ಣ ಪೂಜಾರಿ ಕಾಂಜಿ, ಮುದರ ಐವತೊಕ್ಲು, ಶ್ರೀಮತಿ ಮೋಹಿನಿ ಬಿ.ಎಲ್, ಶ್ರೀಮತಿ ಹೇಮಲತಾ ಚಿದ್ಗಲ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದ.16 ರಂದು ಮುಂಜಾನೆ ಕೇನ್ಯ ಶಾಖೆ ನೂತನ ಕಟ್ಟಡದ ಶಿಲಾನ್ಯಾಸ ಗೊಂಡು ಬಳಿಕ ಸಹಕಾರ ಧ್ವಜಾರೋಹಣ,ಉದ್ಘಾಟನಾ ಸಮಾರಂಭ ಸಂಘದ ಸಭಾಭವನದಲ್ಲಿ ನಡೆದು,
ಸಭಾಭವನದ ಡಿಜಿಟಲ್ ನಾಮಫಲಕ ಹಾಗೂ ಛಾವಣಿ ಅನಾವರಣ, ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟನೆ, ಮರಣ ಸಾಂತ್ವನ ನಿಧಿ ಲೋಕಾರ್ಪಣೆ , ಸನ್ಮಾನ ,ಗೌರವಾರ್ಪಣೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಅಂದು ಅಪರಾಹ್ನ ಕೃಷಿ ವಿಚಾರಗೋಷ್ಠಿ, ಸಾಂ‌ಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಗೊಳ್ಳಲಿದೆ.

ಅ ಪ್ರಯುಕ್ತ ನ.12 ಸಂಘದ ಸದಸ್ಯರಿಗೆ “ಸಹಕಾರ ಕ್ವಿಜ್ 2023″ ರಸ ಪ್ರಶ್ನೆ, ‘ಸಹಕಾರ ಸೌಹಾರ್ದ ಹಗ್ಗ ಜಗ್ಗಾಟ ಸ್ಪರ್ಧೆ” ಸ್ಥಳದಲ್ಲಿಯೇ ತಂಡ ರಚಿಸಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ವಿಭಾಗದಲ್ಲಿ ಜರುಗಲಿದೆ.