ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಯಾತ್ರಾರ್ಥಿ ಮಹಿಳೆ ಸಾವು

0

ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕೆಂದು ಬಂದ ಯಾತ್ರಾರ್ಥಿ 32 ವರ್ಷದ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ವರದಿಯಾಗಿದೆ.

ನ.26 ಕ್ಕೆ ಸುಬ್ರಹ್ಮಣ್ಯ ಬಂದಿದ್ದು ದೇವರ ದರ್ಶನ ಬಳಿಕ
ಅಲ್ಲಿಯೇ ಉಳಿದುಕೊಂಡಿದ್ದರು, ಮರುದಿನ ನ.27 ರ ರಾತ್ರಿಯೂ ಸುಬ್ರಹ್ಮಣ್ಯದಲ್ಲೇ ಉಳಿದು ಕೊಂಡಿದ್ದು ಅಂದು ರಾತ್ರಿ ಲಕ್ಷ್ಮೀ ರವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿದೆ. ಅವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿನ ವೈಧ್ಯಾದಿಕಾರಿಯವರು ಪರೀಕ್ಷಿಸಿ ಮಹಿಳೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಪತಿ ಬೆಂಗಳೂರು ಅಲ್ಸೂರು ನಿವಾಸಿ ಶಿವಕುಮಾರ್ ಎಂಬವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.