ಛಾಯಾಚಿತ್ರಗಳ ಮೂಲಕ ಇತಿಹಾಸ ಕಟ್ಟುವ ಕೆಲಸ ಅನನ್ಯವಾದುದು : ಡಾ.ತುಕಾರಾಮ ಪೂಜಾರಿ

0

ಛಾಯಾಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ. ವಿಶ್ವನಾಥ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ರವರು ಈ ಕಾರ್ಯ ಮಾಡಿದ್ದಾರೆ. ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದರು.


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ನ.28 ರಂದು ನಡೆದ ‘ಛಾಯಾ ಲೋಕ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .


ವಿಶ್ವನಾಥ ಸುವರ್ಣರ ಕೋಟೆಗಳ ದಾಖಲೀಕರಣ ಕೃತಿ ಅಪೂರ್ಣ ದಾಖಲೆಯಾಗಿದೆ ಎಂದವರು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಅವರು ಮಾತನಾಡಿ , ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರ್ನಾಟಕದ ಕೋಟೆಗಳು ಹಾಗೂ ಪಕ್ಷಿಗಳ ಸಮಗ್ರ ಛಾಯಾಚಿತ್ರ ಕೃತಿ ಒಬ್ಬ ಸೃಜನಶೀಲ ಛಾಯಾಗ್ರಾಹಕನ ಸೂಕ್ಷ್ಮ ಪ್ರಜ್ಞೆಯ ಪ್ರತೀಕವಾಗಿದೆ , ಇದೊಂದು ಅತ್ಯುತ್ತಮ ದಾಖಲೀಕರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯುವ ವಕೀಲ ನವನೀತ್ ಬಿ.ಹಿಂಗ್ಹಾಣಿ ಪೊಟೋಗ್ರಾಫಿ ಮತ್ತು ಕಾಪಿರೈಟ್ ಕಾಯಿದೆ ಬಗ್ಗೆ ಮಾತನಾಡಿದರು . ಉಪನ್ಯಾಸಕಿ ಹಾಗೂ ಪಕ್ಷಿ ವೀಕ್ಷಕಿ ವೈಭವಿ ಜಿ. ಅವರು ಕರ್ನಾಟಕದ ಪಕ್ಷಿಗಳ ಕೃತಿ ಬಗ್ಗೆ ಮಾತನಾಡಿದರು .

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ರೋಶನಿ ನಿಲಯದ ಕುಲಸಚಿವೆ ಪ್ರೊ.ವಿನುತಾ ರೈ ಅವರು ಶುಭಕೋರಿ ಮಾತನಾಡಿದರು.

ವಿವಿಧ ಕಾಲೇಜಿನ ಇತಿಹಾಸ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರೊಂದಿಗೆ ಸಂವಾದ ನಡೆಸಿದರು .

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು . ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಹಾಗೂ ಕೋಶಾಧಿಕಾರಿ ಗಿರಿಧರ್ ಶೆಟ್ಟಿ ಸ್ವಾಗತಿಸಿದರು. ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಣಾಸಿ ವಂದಿಸಿದರು.