ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಪೈಂಬೆಚ್ಚಾಲು ಇದರ ಆಶ್ರಯದಲ್ಲಿ ವರ್ಷಂಪತಿ ಆಚರಿಸಿಕೊಂಡು ಬರುತ್ತಿರುವ ಗ್ರಾಂಡ್ ಅಜ್ಮೀರ್ ಮೌಲಿದ್ ಕಾರ್ಯಕ್ರಮ ಜನವರಿ 19, 20, 21 ದಿನಾಂಕ ದಂದು ವಿಜೃಂಭಣೆಯಿಂದ ನಡೆಯಲಿದೆ.
ಈ ಕಾರ್ಯಕ್ರಮಗಳಲ್ಲಿ ಸೈಯದ್ ಕೂರತ್ ತಂಙಳ್,ಸಯ್ಯದ್ ಮುತ್ತನೂರು ತಂಙಳ್,ಸೈಯದ್ ಕುಂಭಕೋಡು ತಂಙಳ್, ಲುಕುಮಾನ್ ಸಕಾಫಿ ಪುಲ್ಲಾರಾ, ನೌಫಾಲ್ ಸಕಾಫಿ ಕಳಸ ಮೊದಲಾದ ಧಾರ್ಮಿಕ ವಿದ್ವಾಂಸರು, ಪಂಡಿತರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.