ಡಿ. 16, 17 : ಪೇರಡ್ಕ ಗೂನಡ್ಕದಲ್ಲಿ ಇಸ್ಲಾಮಿಕ್ ಕಥಾ ಪ್ರಸಂಗ

0


ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಸಂಗಡಿಗರಿಂದ ಕಾರ್ಯಕ್ರಮ


ಮುಹಿಯುದ್ದೀನ್ ರಿಫಾಯಿ ದಫ್ ಎಸೋಸಿಯೇಶನ್ ಪೇರಡ್ಕ ಗೂನಡ್ಕ ಇದರ ವತಿಯಿಂದ ಇಸ್ಲಾಮಿಕ್ ಕಥಾ ಪ್ರಸಂಗ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ಡಿ. 16 ಮತ್ತು 17ರಂದು ನಡೆಯಲಿದೆ.
ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಹೀದ್ ಹಾಗೂ ಎಂ.ಆರ್.ಡಿ.ಎ. ಅಧ್ಯಕ್ಷ ಜಿ.ಕೆ. ಹಮೀದ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಮಣಲಾರುಣ್ಯತ್ತಿಲೆ ಚೋರ ಪೈದಲ್ ವಿಷಯದಡಿ ಝುಬೈರ್ ಮಾಸ್ಟರ್ ತೋಟಿಕ್ಕಲ್ ಹಾಗೂ ಸಂಗಡಿಗರು ಈ ಕಥಾ ಪ್ರಸಂಗ ನಡೆಸಿಕೊಡಲಿದ್ದಾರೆ. ಡಿ. 16 ರಂದು ಪೇರಡ್ಕ ಗೂನಡ್ಕ ಮಸೀದಿಯ ಖತೀಬರಾದ ರಿಯಾಝ್ ಫೈಝಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಲಿದ್ದಾರೆ.


ಡಿ. ೧೭ರಂದು ಸಂಜೆ ವಿವಿಧ ಮದರಸ ಮಕ್ಕಳ ಆಕರ್ಷಕ ದಫ್ ಪ್ರದರ್ಶನ ಮೆರವಣಿಗೆ ನಡೆಯಲಿದ್ದು, ಕಲ್ಲುಗುಂಡಿ ಫಾತಿಮಾ ಮಹಿಳಾ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಆಲಿ ಹಾಜಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂದು ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದೂರಿನ ಸಯ್ಯದ್ ಹಕೀಂ ತಂಙಳ್‌ರವರು ದುವಾ ನೆರವೇರಿಸಲಿದ್ದು, ಪೇರಡ್ಕ ಎಂಂಜೆಎಂ ಖತೀಬರಾದ ರಿಯಾಝ್ ಫೈಝಿ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕೆ. ಹಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಶಾವುಲ್ ಹಮೀದ್ ಕುತ್ತಮೊಟ್ಟೆಯವರನ್ನು ಸನ್ಮಾನಿಸಲಾಗುವುದು. ಮೂರು ಸಭಾ ಕಾರ್ಯಕ್ರಮಗಳಲ್ಲಿ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಎಂಆರ್‌ಡಿಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಸಂಘಟನಾ ಸಮಿತಿಯ ಜಾಕೀರ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿದ್ದರು.