ವಿದ್ಯುತ್ ಕಂಬ ಕಟ್ – ಅಪಾಯದಿಂದ ಪಾರು -ಕಾರು ಜಖಂ
ಐವರ್ನಾಡು ಪೇಟೆ ಸಮೀಪ ಮರುವತ್ತಡ್ಕ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಡಿ.06 ರಂದು ನಡೆದಿದೆ.
ಕಡಬ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ವಿದ್ಯುತ್ ಕಂಬಕ್ಕೆ ಗುದ್ದಿದ್ದು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಬುಡದಿಂದಲೇ ಮುರಿದು ಬಿದ್ದಿದೆ.
ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡಿದೆ.
ಕಾರಿನಲ್ಲಿ ಚಾಲಕರೊಬ್ಬರೆ ಇದ್ದಿದ್ದು ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.