ಎಡಮಂಗಲಕ್ಕೆ ರೈಲು ನಿಲುಗಡೆ : ಸಂಸದರಿಗೆ ಪಂಚಾಯತ್ ವತಿಯಿಂದ ಮನವಿ

0

ಎಡಮಂಗಲಕ್ಕೆ ರೈಲು ನಿಲುಗಡೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಎಡಮಂಗಲದಿಂದ ಪುತ್ತೂರು ಮಂಗಳೂರಿಗೆ ಪ್ರತಿದಿನ ನೂರಾರು ಜನ ಕೆಲಸದ ನಿಮಿತ್ತ ಹಾಗೂ ವಿದ್ಯಾರ್ಥಿಗಳು ಬೆಳಿಗ್ಗೆ ಹೋಗಿ ಸಂಜೆ ತೆರಳುತ್ತಾರೆ. ಮಂಗಳೂರಿನಿಂದ ಸಂಜೆ 6.30ಕ್ಕೆ ಹೊರಟ ರೈಲು ಪುತ್ತೂರಿನಿಂದ ನೇರ ಸುಬ್ರಹ್ಮಣ್ಯ ತನಕ ಬಂದು ಅಲ್ಲಿ ತಂಗುವುದು ಮತ್ತು ಬೆಳಿಗ್ಗೆ ಸುಬ್ರಮಣ್ಯದಿಂದ ಏಳು ಗಂಟೆಗೆ ಹೊರಟರೆ ಐದು ರೈಲು ಸ್ಟೇಷನ್ ನಲ್ಲಿ ಸಾವಿರಾರು ಪ್ರಯಾಣಿಕರು ಪ್ರಯಾಣಿಸಬಹುದು. ಇದರಿಂದ ತುಂಬಾ ಜನರಿಗೆ ಪ್ರಯೋಜನವಾಗಬಹುದೆಂದು ಎಡಮಂಗಲದ ಜನತೆ ಸಹಿ ಹಾಕಿ ಪಂಚಾಯತಿಗೆ ಮನವಿ ನೀಡಿದ್ದರು.
ಪಂಚಾಯತ್ ನವರು ಡಿಸೆಂಬರ್ 2ರಂದು ಮಂಗಳೂರಿನಲ್ಲಿ ರೈಲ್ವೆ ಇಲಾಖೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಪಂಚಾಯತ್ ಸದಸ್ಯರಾದ ಗೀತಾ ಪ್ರವೀಣ್ ರೈ, ವನಿತ ಜಿವೇಂದ್ರ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಮಂಗಳೂರಿಗೆ ದಿನನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕ ಜೀವೇಂದ್ರ ಪೂಜಾರಿ, ನಿರ್ದೇಶಕ ಈಶ್ವರ್ ಜಾಲ್ತಾರು, ಕುಶಾಲಪ್ಪ ದಡ್ಡು, ಬಾಕಿಜಾಲು ವಿನಯಚಂದ್ರ ಗೌಡ ಉಪಸ್ಥಿತರಿದ್ದರು.