ಕರ್ಲಪ್ಪಾಡಿ ಕ್ಷೇತ್ರದ ಜಾತ್ರೆಗೆ ಗೊನೆ ಮುಹೂರ್ತ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಡಿ.15ರಿಂದ ಆರಂಭಗೊಂಡು ಡಿ.19 ರ ವರೆಗೆ ಜಾತ್ರೋತ್ಸವ ಸಂಭ್ರಮ. ಕರ್ಲಪ್ಪಾಡಿ ಕ್ಷೇತ್ರದ ಜಾತ್ರೆ ತಾಲೂಕಿನಲ್ಲಿ ಮೊದಲ ಜಾತ್ರೆಯೆಂಬ ಪ್ರಸಿದ್ಧಿ ಪಡೆದಿದೆ. ಈ ಜಾತ್ರೋತ್ಸವದ ಗೊನೆ ಮುಹೂರ್ತ ಡಿ.8 ರಂದು ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ, ಉತ್ಸವ ಸಮಿತಿ ಮತ್ತು ಬೈಲಿನ ವಂತಿಗೆದಾರರು ಹಾಗೂ ಗ್ರಾಮದ ಭಕ್ತರು ಉಪಸ್ಥಿತರಿದ್ದರು ಪ್ರಧಾನ ಅರ್ಚಕ ಈಶ್ವರ ಭಟ್ ಗೊನೆ ಮುಹೂರ್ತ ನೆರವೇರಿಸಿದರು.