ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಸಮಯ ಸರ್ಪ ಸಂಸ್ಕಾರ ಸೇವೆ ಇಲ್ಲ

0

ಯಾವೆಲ್ಲಾ ಸೇವೆಗಳು ಲಭ್ಯವಿಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ವಾರ್ಷಿಕ ಚಂಪಾಷಷ್ಠಿ ಹಿನ್ನೆಲೆ ಕೆಲ ಸೇವೆಗಳು ಲಭ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ. ಉಳಿದಂತೆ ಕೆಲ ಸೇವೆಗಳು ಇರುವುದಿಲ್ಲ ಅದನ್ನು ಗಮನಿಸುವಂತೆ ಕೋರಲಾಗಿದೆ.

ಡಿ. 12 ಲಕ್ಷದೀಪೋತ್ಸವ, ಡಿ. 16 ಚೌತಿ ಹಾಗೂ ಡಿ. 17 ಪಂಚಮಿ ದಿನಗಳಲ್ಲಿ ಭಕ್ತಾದಿಗಳ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ. ಹಾಗೂ ಡಿ. 18 ಚಂಪಾಷಷ್ಠಿ ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ.

ಡಿ. 18 ರ ಚಂಪಾಷಷ್ಠಿ ದಿನ ಅಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರಲ್ಪಡುವುದಿಲ್ಲ ಎಂದು ತಿಳಿಸಲಾಗಿದೆ.

ಡಿ.12, ಡಿ. 16 , ಡಿ. 17 , ಡಿ. 18, ಡಿ. 24 ರಂದು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ.
ವಾರ್ಷಿಕ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಡಿ.10 ರಿಂದ ಡಿ. 24 ರ ವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ಡಿ. 8 ರಿಂದ ಡಿ.24 ರವರೆಗೆ ಸರ್ಪಸಂಸ್ಕಾರ ಸೇವೆ ನೆರವೇರುವುದಿಲ್ಲ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.