ಮೊಗರ್ಪಣೆ ದಫ್ ಅಸೋಸಿಯೇಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

0

ಮೊಗರ್ಪಣೆ ಮುಹಿಯದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ MRDA (ರಿ ) ಇದರ ಮಹಾಸಭೆ ಮತ್ತು
ನೂತನ ಪದಾಧಿಕಾರಿಗಳ ಆಯ್ಕೆ ಡಿಸೆಂಬರ್ 9 ರಂದು ಮೊಗರ್ಪಣೆ ಮದರಸಾ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಹಿರಿಯರಾದ ಇಬ್ರಾಹಿಂ ಡಿ, ಹಾಜಿ ಎಚ್ ಎ ಉಮ್ಮರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಮಿತಿ ವತಿಯಿಂದ ಮುಂದಿನ ಸಾಲಿನಲ್ಲಿ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಬಳಿಕ ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್,ಉಪಾಧ್ಯಕ್ಷ ರಶೀದ್ ಕೆವಿಜಿ ಕೋಶಾಧಿಕಾರಿಯಾಗಿ ಹಾಜಿ ಉಮ್ಮರ್ ಹೆಚ್ ಎ,
ಪ್ರ.ಕಾರ್ಯದರ್ಶಿ ಶಾಫಿ ಅಡ್ಕ,
ಜತೆ ಕಾರ್ಯದರ್ಶಿ ಶಮೀರ್ ಹೆಚ್ ವೈ, ನಿರ್ದೇಶಕರುಗಳಾಗಿ ಅಬ್ದುಲ್ಲಾ ಡಿಎಂ, ಅಬ್ದುಲ್ಲಾ ಹಾಜಿ ಜಯನಗರ, ಸಂಶುದ್ದೀನ್ ಎಚ್ ಎಲ್ ಎಸ್, ಬಶೀರ್ ಕೆ ಎಂ, ಇಬ್ರಾಹಿಂ ಡಿ, ಸಂಶುದ್ದೀನ್ ಮೂಸಾನ್ ಇವರನ್ನು ಆಯ್ಕೆ ಮಾಡಲಾಯಿತು.
ಸಂಶುದ್ದೀನ್ ಮೂಸಾನ್ ಸ್ವಾಗತಿಸಿ ಹಾಜಿ ಉಮ್ಮರ್ ಹೆಚ್ಎ ವಂದಿಸಿದರು.