ಕುಂಬರ್ಚೋಡು ಮುಹಿಯದ್ದೀನ್ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ದಾರುಲ್ ಉಲೂಮ್ ಮದರಸದಲ್ಲಿ ಡಿ.9ರಂದು ನಡೆಯಿತು.
ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಕರೀಂ ಬಿ ಯಂ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಸ್ಥಳೀಯ ಮಸೀದಿ ಖತಿಬರಾದ ಅಶ್ರಫ್ ಮುಸ್ಲಿಯಾರ್ ದುವಾ ನೆರೆವೇರಿಸಿದರು.
ವೇದಿಕೆಯಲ್ಲಿ ಸಲಹಾ ಸಮಿತಿ
ಸದಸ್ಯರಾದ ಹಾಮು ಹಾಜಿ,
ಸಯ್ಯದ್ ಇಸ್ಮಾಹಿಲ್,ಮದರಸ ಮುಹಲ್ಲಿಮ್ ರವೂಫ್ ಆದೂರು ಉಪಸ್ಥಿತರಿದ್ದರು.ಪ್ರದಾನ
ಕಾರ್ಯದರ್ಶಿಯಾದ ಅಬ್ದುಲ್
ಖಾದರ್ ಅಕ್ಕರೆ ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.
ನಂತರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಶರೀಫ್ ಚೆರ್ಕಳ,ಆಮು ಹಾಜಿ
ಸವಣೂರು,ಅಶ್ರಫ್ ಮುಸ್ಲಿಯಾರ್ ರವರನ್ನು ಆಯ್ಕೆ ಮಾಡಲಾಯಿತು.
ಬಳಿಕ ನೂತನ ಸಮಿತಿ ರಚಿಸಿ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಹಾಜಿ ಕೆ ಎಂ
ಉಪಾಧ್ಯಕ್ಷರಾಗಿ ಅಬ್ದುಲ್ ಕರೀಂ ಬಿ ಎಮ್,ಕಾರ್ಯದರ್ಶಿಯಾಗಿ
ಅಬ್ದುಲ್ ಖಾದರ್ ಅಕ್ಕರೆ, ಖಜಾಂಜಿಯಾಗಿ ಕುಂಞಾಮು ಕೆ ಎಂ,ಜೊತೆ ಕಾರ್ಯದರ್ಶಿಯಾಗಿ
ಆಶ್ರಫ್ ಪ್ರಗತಿ,ಸಮಿತಿ ಸದಸ್ಯರುಗಳಾಗಿ ಮೊಹಿಯದ್ದಿನ್ ಕಾರ್ಲೆ, ಸಿರಾಜ್ ಕೆ ಪಿ,ಕರೀಂ ಡಿ ಎಮ್,ಅಬ್ಬಾಸ್ ಬಿ ಎಮ್,ಅಬ್ಬಾಸ್ ಅಕ್ಕರೆ
ಅಬ್ದುಲ್ ಗಫ್ಫಾರ್,
ಇವರನ್ನು ಆಯ್ಕೆ ಮಾಡಲಾಯಿತು.