ಪಂಜ : ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ

0

ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ
ದ.8 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆಯಿತು.


ಯಕ್ಷಗಾನ ಕೇಂದ್ರದ ಗುರು ಯಕ್ಷಮಣಿ ಗಿರೀಶ್ ಗಡಿಕಲ್ಲು ರವರ ನಿರ್ದೇಶನದಲ್ಲಿ ಕುಶಲವ ಯಕ್ಷಗಾನ ಪ್ರಸಂಗ ಪ್ರದರ್ಶನ ಗೊಂಡಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಶಾಶಂಕ ಎಲಿಮಲೆ, ರಚನ ಚಿದ್ಗಲ್ಲು,
ಚಂಡೆ ಲಕ್ಷ್ಮೀಶ ಶಗ್ರೀತ್ತಾಯ ಪಂಜ,
ಮದ್ದಳೆ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಚಕ್ರತಾಳ ಪ್ರೀತೇಶ್, ಹರ್ಪೀತ್, ಪಾತ್ರವರ್ಗದಲ್ಲಿ
ಶತ್ರುಘ್ನ ಗಗನ್,ಧಮನ ಅಂಶು,
ಪುಷ್ಕಳ ಯಶ್ವೀತ್,ವಟುಗಳಾಗಿ ತನ್ಮಯಿ.ಮನ್ವಿತ್,ತನುಷ್.ಸೋಹನ್,
ಗಗನ್,ಲವ ಚೇತನ್, ಸೀತೆ ಜ್ಞಾನಶ್ರೀ, ಕುಶ ನಿನಾದ್, ರಾಮ ಧೃತಿ, ಲಕ್ಷ್ಮಣ ವಿನ್ಯಾಸ್, ವಾಲ್ಮೀಕಿ ಕಾರ್ತಿಕ್ ಪಾತ್ರ ನಿರ್ವಹಿಸಿದರು .


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಗೌಡ ಪುತ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು.