ದೀಪ್ತಿ ದೇರಪ್ಪಜ್ಜನಮನೆ ಜಪಾನ್ ಗೆ

0


ಪ್ರಸ್ತುತ ನಿಟ್ಟೆ ಯುನಿವರ್ಸಿಟಿಯಲ್ಲಿ ಸೀನಿಯರ್ ರಿಸರ್ಚ್ ಫೆಲೋ ಆಗಿ ಉದ್ಯೋಗದಲ್ಲಿರುವ ದೀಪ್ತಿ ದೇರಪ್ಪಜ್ಜನ ಮನೆ ಕಾರ್ಯಾಗಾರದಲ್ಲಿ ಭಾಗವಹಿಸಲು ಜಪಾನ್ ಗೆ ತೆರಳಲಿದ್ದಾರೆ.
ಡಿ. 11 ರಿಂದ 7 ದಿನಗಳ ತನಕ ಜಪಾನ್ ನ ಮಿಯಾಝಕಿ ಯುನಿವರ್ಸಿಟಿ ನೇತೃತ್ವದಲ್ಲಿನಡೆಯುವ “ಜಪಾನ್ ಏಷಿಯಾ ಯೂತ್ ಎಕ್ಸ್ಜೇಂಜ್ ಪ್ರೊಗ್ರಾಮ್ ಇನ್ ಸೈನ್ಸ್”ಕಾರ್ಯಕ್ರಮದಲ್ಲಿ ಭಾಗವಹಿಸಲು ಜಪಾನ್ ದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ದೀಪ್ತಿಯವರು ನಾಲ್ಕೂರು ಗ್ರಾಮದ ದೇರಪ್ಪಜ್ಜನ ಮನೆ ದಿ.ಕೋಮಲಾಂಗ ಡಿ. ಮತ್ತು ಚಿತ್ರಕಲಾ ದಂಪತಿಯ ಪುತ್ರಿ.

ಸ.ಹಿ.ಪ್ರಾ.ಶಾಲೆ ಪೈಲಾರು,ಸರಕಾರಿ ಪ್ರೌಢಶಾಲೆ ಗುತ್ತಿಗಾರು, ಎಸ್.ಎಸ್.ಪಿ.ಯು.ಸಿ ಸುಬ್ರಹ್ಮಣ್ಯ, ಎನ್.ಎಂ.ಸಿ. ಸುಳ್ಯ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆಯಲ್ಲಿ ತನ್ನ ಶಿಕ್ಷಣವನ್ನು ಪಡೆದಿರುತ್ತಾರೆ.