ಸುಬ್ರಹ್ಮಣ್ಯ: ಅನ್ನದಾನದ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ಡಿ.16 ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು.ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು.ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು ಜಾತ್ರಾ ಸಮಯ ವಿಶೇಷ ಬೋಜನ ಪ್ರಸಾದ ವಿತರಣೆಯ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ ನಡೆಯಿತು.


ಆದಿ ಬೋಜನ ಶಾಲೆಯಲ್ಲಿ ಪಲ್ಲಪೂಜೆ:
ಪುರೋಹಿತ ಪ್ರಸನ್ನ ಹೊಳ್ಳ ಜಾತ್ರೋತ್ಸವದ ಪ್ರಧಾನ ೪ ದಿನಗಳಾದ ಚೌತಿ,ಪಂಚಮಿ,ಷಷ್ಠಿ ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನೆರವೇರುತ್ತದೆ.ಈ ಸಂಬಂಧವಾಗಿ ಮದ್ಯಾಹ್ನ ಪುರೋಹಿತ ಪ್ರಸನ್ನ ಹೊಳ್ಳ ಆದಿಯ ಬೋಜನಶಾಲೆಯಲ್ಲಿ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು.ಬಳಿಕ ಪ್ರಸಾದ ವಿತರಿಸಿದರು. ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರ ನಿರಂತರ ಅನ್ನದಾನ ನೀಡುವ ಕ್ಷೇತ್ರವಾದುದರಿಂದ ಚೌತಿ ದಿನ ಅನ್ನಪ್ರಸಾದಕ್ಕೆ ಪೂಜೆ ನೆರವೇರುತ್ತದೆ. ಈ ಬಾರಿ ಆದಿ ಬೋಜನ ಶಾಲೆಯಲ್ಲಿ ಜಾತ್ರೋತ್ಸವದ ಮೂರು ದಿನಗಳ ಕಾಲ ಪ್ರಥಮ ಬಾರಿ ಭಕ್ತರಿಗರೆ ಬೆಳಗ್ಗಿನ ಉಪಹಾರ ಕೂಡಾ ವಿತರಣೆಯಾಗಲಿದೆ.


ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು,ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರು, ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.