ಡಿ.29,30 : ಪೆರುವಾಜೆ ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ

0

ಮತ್ತು ಸತ್ಯನಾರಾಯಣ ಪೂಜೆ ಹಾಗೂ ಕೊರಗಜ್ಜನ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.29 ರಂದು ನಡೆಯಲಿರುವುದು.


ಬೆಳಿಗ್ಗೆ ಗಂಟೆ 8.00 ಕ್ಕೆ ಗಣಹೋಮ, 9.00 ಕ್ಕೆ ಸತ್ಯನಾರಾಯಣ ಪೂಜೆ,ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 7.00 ಕ್ಕೆ ದೈವದ ಭಂಡಾರ ತೆಗೆಯುವುದು,ರಾತ್ರಿ ಗಂಟೆ 8.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಬಳಿಕ ರಾತ್ರಿ ಗಂಟೆ 9.00 ಕ್ಕೆ ಶ್ರೀ ಕೊರಗ ತನಿಯ ನೇಮೋತ್ಸವ ನಡೆಯಲಿದೆ.


ಡಿ.30 ರಂದು ಐವರ್ನಾಡು ಗ್ರಾಮದ ದೇವರಕಾನ ಮನೆಯ ಕೆ.ಬಿ.ಪ್ರಸಾದ್ ನಿತ್ಯ ಚಿಕನ್ ಸೆಂಟರ್ ಬೆಳ್ಳಾರೆ ಹಾಗೂ ಮನೆಯವರ ಹರಕೆಯ ನೇಮೋತ್ಸವವು ರಾತ್ರಿ ಗಂಟೆ 8.00 ರಿಂದ ನಡೆಯಲಿರುವುದು.