ಬೆಳ್ತಂಗಡಿ ತಾಲೂಕು ಪಂಚಾಯತ್ ಕಾಯ೯ನಿವ೯ಹಕ ಅಧಿಕಾರಿ ಕುಸುಮಾಧರ್ ಬಿ.ಅವರು ಹೊಳೆನರಸೀಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವಗಾ೯ವಣೆಗೊಂಡಿದ್ದಾರೆ.
ಇವರು ಬೆಳ್ತಂಗಡಿ ತಾ.ಪಂ.ದಲ್ಲಿ 3 ವಷ೯ ನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದಾರೆ. ಕುಸುಮಾಧರರವರು ಮೂಲತಃ ಏನೆಕ್ಕಲ್ ನ ಬೂದಿಪಳ್ಳದವರು.
ಸರ್ಕಾರದ ವರ್ಗಾವಣೆ ಆದೇಶದಂತೆ ಕುಸುಮಾಧರ್ ಬಿ.ರವರು ತಮ್ಮ ಹುದ್ದೆಯ ಪ್ರಭಾರವನ್ನು ಕಡಬ ತಾ.ಪಂ.ಯ ಕಾಯ೯ನಿರ್ವಾಹಕ ಅಧಿಕಾರಿ ಭವಾನಿಶಂಕರ್ ರವರಿಗೆ ಡಿ.22 ರಂದು ಹಸ್ತಾoತರಿಸಿದರು.